alex Certify
ಕನ್ನಡ ದುನಿಯಾ       Mobile App
       

Kannada Duniya

ಆಸಮಾಧಾನಕ್ಕೆ ಕಾರಣವಾಗಿದೆ ಶಶಿಕಲಾ ಸಹೋದರನ ಹೇಳಿಕೆ

aiadmk-fi

ಚೆನ್ನೈ: ಈಗಾಗಲೇ ಪಕ್ಷ ಮತ್ತು ಆಡಳಿತದಲ್ಲಿ ಹಿಡಿತ ಸಾಧಿಸಿರುವ ಶಶಿಕಲಾ, ಮುಂದಿನ ಹಂತದಲ್ಲಿ ಮುಖ್ಯಮಂತ್ರಿಯಾಗಲು ಭೂಮಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಜಯಲಲಿತಾ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವ ಮನ್ನಾರ್ ಗುಡಿ ಮಾಫಿಯಾ, ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಶಶಿಕಲಾ ಸಹೋದರ ವಿ. ದಿವಾಕರನ್, ಪಕ್ಷಕ್ಕಾಗಿ ನಮ್ಮ ಕುಟುಂಬ ಸಾಕಷ್ಟು ಶ್ರಮ ಹಾಕಿದೆ ಎಂದು ಹೇಳಿದ್ದಾರೆ. ನಟರಾಜನ್ ಅವರು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಯಲಲಿತಾರನ್ನು ಮುಖ್ಯಮಂತ್ರಿ ಮಾಡಿದ್ದು ನಾವು ಎಂದೆಲ್ಲಾ ಹೇಳಿದ್ದಾರೆ.

ಈ ನಡುವೆ ಜನವರಿ 29 ರಂದು ಶಶಿಕಲಾ ಮುಖ್ಯಮಂತ್ರಿ ಹುದ್ದೆಗೇರಲು ತಯಾರಿ ನಡೆಸಿದ್ದಾರೆ. ದಿವಾಕರನ್ ಹೇಳಿಕೆ ಬಗ್ಗೆ ಮಾಜಿ ಸಚಿವ ಕೆ.ಪಿ. ಮುನಿಸ್ವಾಮಿ ಆಕ್ಷೇಪಿಸಿದ್ದಾರೆ.

ಜಯಲಲಿತಾ ಅವರ ಬಗ್ಗೆ ಹಿನ್ನಡೆಯುಂಟು ಮಾಡುವಂತಹ ಹೇಳಿಕೆಯನ್ನು ದಿವಾಕರ್ ನೀಡಬಾರದು. ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯವಾಗಿದ್ದು, ಇದರ ಬಗ್ಗೆ ನಾಯಕಿ ಶಶಿಕಲಾ ಅವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಶಶಿಕಲಾ ಅವರಿಗೆ ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾಗಿದೆ. ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ನಾಯಕರ ನಡುವೆ ಪೈಪೋಟಿಯೇ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...