alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 3 ಗಂಟೆಯಲ್ಲಿ ಸಂಗ್ರಹವಾಯ್ತು 150 ಕೋಟಿ ರೂಪಾಯಿ

ಅಹ್ಮದಾಬಾದ್: ವಿಶ್ವ ಉಮಿಯಾ ಧಾಮ್ ನಿರ್ಮಾಣಕ್ಕೆ ಮುಂದಾಗಿರುವ ಪಾಟಿದಾರ್ ಸಮುದಾಯಕ್ಕೆ ಹಣದ ಹೊಳೆ ಹರಿದಿದೆ. ಇಲ್ಲಿನ‌ ಜಸ್ಪುರ್ ರಸ್ತೆ ವೈಷ್ಣೋದೇವಿ ವೃತ್ತದ ಬಳಿ 40 ಎಕರೆ ವಿಶಾಲ ಜಾಗದಲ್ಲಿ ವಿಶ್ವ ಉಮಿಯಾ ಫೌಂಡೇಷನ್ ನಿರ್ಮಿಸಲು ಉದ್ದೇಶಿಸಿರುವ ಉಮಿಯಾಧಾಮ್ ನಲ್ಲಿ ಉಮಿಯಾ ದೇವಿ ಮಂದಿರ, ಜತೆಗೆ ಆಸ್ಪತ್ರೆ ಸಂಕೀರ್ಣ, ಕ್ರೀಡಾ ಕಾಂಪ್ಲೆಕ್ಸ್, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಎರಡು ದಿನದ ಹಿಂದೆ ನಡೆದ ಪಾಟಿದಾರ್‌ ಸಮುದಾಯದ ಸಭೆಯಲ್ಲಿ ಈ ಯೋಜನೆಗೆ 150 ಕೋಟಿ ರೂ.ನ ವಾಗ್ದಾನ ಸಿಕ್ಕಿದೆ. ಅಂದ ಹಾಗೆ ಒಂದು ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆ. 2024ರಲ್ಲಿ ಪೂರ್ಣಗೊಳ್ಳಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಯೋಜನೆ ಕೋ ಆರ್ಡಿನೇಟರ್, ಬಿಜೆಪಿ ಮುಖಂಡ ಸಿ.ಕೆ. ಪಟೇಲ್, ಸಾಮಾಜಿಕ ಉದ್ದೇಶಕ್ಕಾಗಿನ ಯೋಜನೆಗೆ ಅತಿ ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಸ್ಪಂದನೆ ಸಿಕ್ಕಿದೆ. ಫೌಂಡೇಷನ್ ಈಗಾಗಲೇ ನೂರು ಕೋಟಿ ರೂ. ಸಂಗ್ರಹಿಸಿದ್ದು, 150 ಕೋಟಿ ರೂ. ವಾಗ್ದಾನ ಸಿಕ್ಕಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...