alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಲ್ಲಿ ಮೊದಲ ಬಾರಿ ಭಾರತದಲ್ಲಿ ಸಿದ್ಧವಾಯ್ತು ಡೆಂಗ್ಯು ಔಷಧಿ

ಕೇವಲ ದೇಶವೊಂದೇ ಅಲ್ಲ ವಿಶ್ವದಲ್ಲೇ ಮೊದಲ ಬಾರಿ ಭಾರತೀಯ ವಿಜ್ಞಾನಿಗಳು ಡೆಂಗ್ಯುಗೆ ಔಷಧಿ ಕಂಡು ಹಿಡಿದಿದ್ದಾರೆ. ಈ ಔಷಧಿ ಮೇಲೆ ನಡೆದ ಪ್ರಯೋಗ ಯಶಸ್ವಿಯಾಗಿದೆ. ಮಾರುಕಟ್ಟೆಗೆ ಔಷಧಿ ಬರುವ ಮುನ್ನ ಜಾಗತಿಕ ಮಟ್ಟದಲ್ಲಿ ನಡೆಯುವ ಗುಣಮಟ್ಟದ ಪರೀಕ್ಷೆ ನಡೆಯುತ್ತಿದೆ.

ಡೆಂಗ್ಯು ರೋಗಿಗಳಿಗೆ 2019ರ ಸುಮಾರಿಗೆ ಮಾರುಕಟ್ಟೆಯಲ್ಲಿ ಈ ಔಷಧಿ ಸಿಗಲಿದೆ ಎಂದು ಅಂದಾಜಿಸಲಾಗಿದೆ.  ಸಂಪೂರ್ಣವಾಗಿ ಆಯುರ್ವೇದದ ಈ ಔಷಧಿಗೆ 7 ರೀತಿಯ ಔಷಧಿ ಸಸ್ಯವನ್ನು ಬಳಸಲಾಗಿದೆ. ಆಯುಶ್ ಸಚಿವಾಲಯದ ಸಿ ಸಿ ಆರ್ ಎಸ್ ವಿಜ್ಞಾನಿಗಳು ಇದನ್ನು ಸಿದ್ಧಪಡಿಸಿದ್ದಾರೆ.

ಈ ಔಷಧಿ ತಯಾರಿಸಲು ಒಂದು ಡಜನ್ ಗಿಂತಲೂ ಹೆಚ್ಚು ಸಂಶೋಧಕರಿಗೆ 2 ವರ್ಷ ಹಿಡಿದಿದೆ ಎನ್ನಲಾಗಿದೆ. ಸಿ ಸಿ ಆರ್ ಎಸ್ ಫಲಿತಾಂಶದ ನಂತ್ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ  ಔಷಧಿ ತಯಾರಿಸಲು ಶುರು ಮಾಡಿದೆ. ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ ಡೆಂಗ್ಯು ರೋಗಿಗಳಿಗೆ ಔಷಧಿ ನೀಡಿ ಪರೀಕ್ಷೆ ನಡೆಸಲಾಗಿದೆ. ಔಷಧಿ ಪಡೆದ ನಂತ್ರ ರೋಗಿಗಳ ರಕ್ತದಲ್ಲಿ ಪ್ಲೇಟ್ಲೆಟ್ ಪ್ರಮಾಣ ಹೆಚ್ಚಾಗಿದೆಯಂತೆ. ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರಿಲ್ಲ ಎನ್ನಲಾಗಿದೆ.

ಈವರೆಗೆ ಡೆಂಗ್ಯುಗೆ ಯಾವುದೇ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಜ್ವರ ಕಡಿಮೆ ಮಾಡಲು ವೈದ್ಯರು ಔಷಧಿ ನೀಡುತ್ತಾರೆ. ಪ್ಲೇಟ್ಲೆಟ್ ಹೆಚ್ಚಿಸಿಕೊಳ್ಳಲು ದ್ರವ ಪದಾರ್ಥ ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...