alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ವಂಚನೆ ವಿವರಗಳ ಫೈಲುಗಳಿದ್ದ ಕಚೇರಿಗೆ ಬೆಂಕಿ

ಮುಂಬೈನ ಬಲಾರ್ಡ್ ಎಸ್ಟೇಟ್ ನಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿ ‘ಸಿಂಧಿಯಾ ಹೌಸ್’ ಗೆ ಬೆಂಕಿ ತಗುಲಿದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕಚೇರಿಯಲ್ಲಿ ಬಹುಕೋಟಿ ವಂಚನೆ ಪ್ರಕರಣದ ಆರೋಪಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದವರಿಗೆ ಸಂಬಂಧಪಟ್ಟ ಪ್ರಮುಖ ಫೈಲುಗಳನ್ನು ಸಂಗ್ರಹಿಸಿಡಲಾಗಿತ್ತೆಂದು ಹೇಳಲಾಗಿದೆ.

ಶುಕ್ರವಾರ ಸಂಜೆ 4.30 ರ ಸುಮಾರಿಗೆ ಮೂರು, ನಾಲ್ಕು ಹಾಗೂ ಐದನೇ ಅಂತಸ್ತಿನ ಕಟ್ಟಡಗಳಿಗೆ ಬೆಂಕಿ ತಗುಲಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಆರು ಮಂದಿಯನ್ನು ರಕ್ಷಿಸಿ ಬೆಂಕಿಯನ್ನು ತಹಬದಿಗೆ ತಂದರು. ಈ ಕಚೇರಿ ಸುಮಾರು ಹನ್ನೆರಡು ಸಾವಿರ ಚದರಡಿ ವಿಸ್ತೀರ್ಣದಲ್ಲಿದ್ದು, ನೂರಕ್ಕೂ ಅಧಿಕ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಟ್ಟಡಕ್ಕೆ ಬೆಂಕಿ ತಗಲಲು ಕಾರಣವೇನೆಂಬುದು ತಿಳಿದುಬಂದಿಲ್ಲ. ಕಚೇರಿಯನ್ನು ಹಿಂದಿನಂತೆ ಸುಸ್ಥಿತಿಯಲ್ಲಿಡಲು ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಹೇಳಲಾಗಿದ್ದು, ಯಾವ್ಯಾವ ದಾಖಲೆಗಳು ಭಸ್ಮವಾಗಿವೆ ಎಂಬುದರ ಪರಿಶೀಲನೆಯನ್ನು ಇನ್ನೂ ನಡೆಸಬೇಕಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...