alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಂಡಾರ್ಚನೆ ವೇಳೆಯಲ್ಲೇ ನಡೆಯಿತು ದುರಂತ

fire 20

ಹೈದರಾಬಾದ್: ದೇವರ ಉತ್ಸವಗಳಲ್ಲಿ ಕೆಲವು ಕಡೆ ಕೆಂಡರ್ಚಾನೆ ಜೋರಾಗಿ ನಡೆಯುತ್ತದೆ. ದೊಡ್ಡ ಗಾತ್ರದಲ್ಲಿ ಬೆಂಕಿ ಹಾಕಿ, ಕೆಂಡದ ರಾಶಿ ಮಾಡಿ ಅದರ ಮೇಲೆ ಭಕ್ತರು ನಡೆಯುತ್ತಾರೆ. ಹೀಗೆ ಭಕ್ತಿಯಿಂದ ನಡೆದಾಡಿದರೆ
ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬುದು ಭಕ್ತರ ನಂಬಿಕೆ.

ಹೀಗೆ ಕೆಂಡದ ರಾಶಿಯ ಮೇಲೆ ನಡೆದಾಡುವಾಗ ಬಿದ್ದು ಮಹಿಳೆಯರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಚರ್ವುಗಟ್ಟು ಎಂಬ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಬ್ರಹ್ಮೋತ್ಸವ, ಜಾತ್ರೆಯ ಸಂದರ್ಭದಲ್ಲಿ ಕೆಂಡಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಂಡದ ಮೇಲೆ ಭಯದಿಂದ ಜೋರಾಗಿ ನಡೆಯುತ್ತಿದ್ದ ಮಹಿಳೆಯೊಬ್ಬರು ಕೆಳಕ್ಕೆ ಬಿದ್ದಿದ್ದಾರೆ. ಮಹಿಳೆ ಕುಸಿದುಬಿದ್ದು, ಕೆಂಡದ ರಾಶಿಯಲ್ಲಿ ಒದ್ದಾಡುವಾಗ ಪೊಲೀಸ್ ಒಬ್ಬರು ಅವರನ್ನು ರಕ್ಷಿಸಿದ್ದಾರೆ.

ಮತ್ತೊಬ್ಬ ಮಹಿಳೆ ಕೆಂಡದ ಮೇಲೆ ನಡೆಯುವ ಆರಂಭದಲ್ಲಿ ತೊಡರುಗಾಲಾಗಿ ಬಿದ್ದಿದ್ದಾರೆ. ಅವರನ್ನು ಕೂಡ ರಕ್ಷಿಸಲಾಗಿದೆ. ಇಬ್ಬರೂ ಮಹಿಳೆಯರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...