alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ

ಇತ್ತೀಚಿನ ದಿನದಲ್ಲಿ ಮುಂಬೈನ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅವಘಡಗಳ‌ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೀಗ ಬೈಕುಲ ಪ್ರದೇಶದ 23 ಅಂತಸ್ತಿನ ಕಟ್ಟಡ ಈ ಪಟ್ಟಿಗೆ ಸೇರಿದೆ.

ಶನಿವಾರ ತಡರಾತ್ರಿ‌ 23 ಅಂತಸ್ತಿನ ಕಟ್ಟಡದ 10ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯರು ಅಗ್ನಿ ಶಾಮಕ‌ ದಳಕ್ಕೆ ಮಾಹಿತಿ‌ ನೀಡಿದ್ದಾರೆ.

11 ರ ಸುಮಾರಿಗೆ ಆರಂಭಗೊಂಡ ಅಗ್ನಿ‌ ನಂದಿಸುವ ಕಾರ್ಯ ಬಹು ಹೊತ್ತಿನವರೆಗೂ ನಡೆದು ಬಳಿಕ ಯಶಸ್ವಿಯಾಗಿದೆ. ಜೂನ್ ತಿಂಗಳಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಾಸವಿರುವ 34 ಅಂತಸ್ತಿನ ಬಿಯೋಮಾಂಡೆ ಟವರ್ಸ್ ನಲ್ಲಿ‌ ಬೆಂಕಿ ಕಾಣಿಸಿಕೊಂಡಿತ್ತು.

ಬಳಿಕ‌ ಕೆಲ ತಿಂಗಳ ಹಿಂದೆ ಕೇಂದ್ರೀಯ ‌ಮುಂಬೈನ ಕ್ರಿಸ್ಟಲ್ ಟವರ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಕೊನೆಯುಸಿರೆಳೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...