alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ನಿವಾಸದ 9 ನೇ ಅಂತಸ್ತಿನಲ್ಲಿ ಬೆಂಕಿ

dey2fxeuiaacizb

ಭಾರತದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿಯವರ ನಿವಾಸದಲ್ಲಿ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ನಿವಾಸ ಎಂದು ಪರಿಗಣಿಸಲ್ಪಟ್ಟಿರುವ ಮುಂಬೈನ ಅಲ್ಟಾಮೌಂಟ್ ರೋಡ್ ನಲ್ಲಿರುವ ‘ಅಂಟಿಲ್ಲಾ’ ದ ಒಂಭತ್ತನೆ ಅಂತಸ್ತಿನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ.

ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಒಂಭತ್ತನೆ ಅಂತಸ್ತಿನಲ್ಲಿ ಅಳವಡಿಸಿರುವ 4 ಜಿ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ.

ಈ ಬೆಂಕಿ ಅನಾಹುತದಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿಲ್ಲವೆಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದೂ ಆಸ್ತಿ ಹಾನಿ ತಪ್ಪಲು ಕಾರಣವಾಗಿದೆ. ಅಲ್ಟಾಮೌಂಟ್ ರೋಡ್ ನಲ್ಲಿ ಸಮುದ್ರಕ್ಕಾಭಿಮುಖವಾಗಿ ನಿರ್ಮಾಣಗೊಂಡಿರುವ ‘ಅಂಟಿಲ್ಲಾ’ ಹೆಸರಿನ ಈ ನಿವಾಸ 27 ಅಂತಸ್ತುಗಳನ್ನು ಹೊಂದಿದೆ. ಇದರ ಮೌಲ್ಯ 1 ಬಿಲಿಯನ್ ಡಾಲರ್ ಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...