alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದೆಯ ಮನೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ

FIR filed against expelled AIADMK MP Sasikala Pushpa

ಮಧುರೈ: ರಾಜ್ಯಸಭೆ ಸದಸ್ಯರೊಬ್ಬರ ಕಪಾಳಕ್ಕೆ ಹೊಡೆದು, ಇತ್ತೀಚೆಗಷ್ಟೇ ಸುದ್ದಿಯಾಗಿದ್ದ, ತಮಿಳುನಾಡು ಸಂಸದೆ ಶಶಿಕಲಾ ಪುಷ್ಪಾ ಅವರ ಮನೆಯಲ್ಲಿ, ಕೆಲಸ ಮಾಡುತ್ತಿದ್ದ ಸಂಬಂಧಿ ಹಾಗೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿದೆ.

ನೀತಿ, ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಎ.ಐ.ಎ.ಡಿ.ಎಂ.ಕೆ ಪಕ್ಷದಿಂದ ಉಚ್ಛಾಟನೆಯಾಗಿರುವ ಶಶಿಕಲಾ ಪುಷ್ಪಾ ಅವರು ರಾಜ್ಯಸಭೆಯಲ್ಲಿ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದರು. ಇದೀಗ ಅವರ ಪತಿ ಲಿಂಗೇಶ್ವರ ತಿಲಗನ್ ಹಾಗೂ ಪುತ್ರ ಪ್ರದೀಪ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 2011 ರಿಂದ 2014ರವರೆಗೆ ಅವರ ಮನೆಯಲ್ಲಿ ಕೆಲಸ ಮಾಡಿದ್ದ ಯುವತಿ ಹಾಗೂ ಸಂಸದೆಯ ಸಂಬಂಧಿ, ತೂತುಕುಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರನ್ನು ಪುದುಕೋಟೈ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ. ತೂತುಕುಡಿಯಲ್ಲಿ ಶಶಿಕಲಾ ಪುಷ್ಪಾ ಮೇಯರ್ ಆಗಿದ್ದ ಸಂದರ್ಭದಲ್ಲಿ ಅವರ ಪತಿ ಹಾಗೂ ಪುತ್ರ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇಬ್ಬರೂ ದೂರು ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...