alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯಪಾನ ಪತ್ತೆ ಪರೀಕ್ಷೆ ನಿರಾಕರಿಸಿದ್ದ ಪೈಲೆಟ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ವಿಮಾನ ಯಾನ ನಿಯಮಗಳನ್ನು ಪಾಲಿಸದ ಏರ್‌ ಇಂಡಿಯಾ ಹಾಗೂ ವಿಮಾನಯಾನ ನಿಯಂತ್ರಕ ಡಿಜಿಸಿಎಯ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಆದೇಶಿಸಿದೆ.

ಏರ್‌ ಇಂಡಿಯಾದ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್‌ ಅರವಿಂದ್ ಕಪ್ತಪಾಲಿಯಾ ಹಾಗೂ ಡಿಜಿಸಿಎ ಜಂಟಿ ನಿದೇರ್ಶಕ ಜನರಲ್‌ ಲಲಿತ್‌ ಗುಪ್ತಾ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

2017 ಜ.17ರಂದು ಅರವಿಂದ್ ಅವರು ನವದೆಹಲಿಯಿಂದ ಬೆಂಗಳೂರಿಗೆ ತೆರಳುವ ವಿಮಾನಕ್ಕೆ ಪೈಲೆಟ್ ಆಗಿದ್ದರು. ಏರ್‌ಪೋರ್ಟ್‌ನಲ್ಲಿ ಅವರು, ಕಾರ್ಯಾಚರಣೆಗೆ ಮುನ್ನ ಮದ್ಯಪಾನ ಮಾಡದಿರುವ ಬಗ್ಗೆ ಖಚಿತಪಡಿಸಲು ಇರುವ ಪ್ರಿ ಫ್ಲೈಟ್‌ ಬ್ರೆತ್‌ ಹಾಗೂ ಅನಲೈಸರ್‌ ಟೆಸ್ಟ್‌ಗೆ ನಿರಾಕರಿಸಿದ್ದಾರೆ. ಅಂತೆಯೇ ಬೆಂಗಳೂರಿನಲ್ಲೂ ಈ ಪರೀಕ್ಷೆಗೆ ಒಳಪಡಲು ಅವರು ಒಪ್ಪಿಲ್ಲ.

ವಾಪಸ್‌ ನವದೆಹಲಿಗೆ ಬಂದ ಬಳಿಕ ಅವರು, ವೈದ್ಯಕೀಯ ಕೊಠಡಿಗೆ ತೆರಳಿ ಪರೀಕ್ಷೆ ನಡೆಸಿರುವ ಬಗ್ಗೆ ಸುಳ್ಳು ವರದಿಯನ್ನು ಸಲ್ಲಿಸಿದ್ದರು. ಈ ಸಂಬಂಧ ಪೈಲೆಟ್ಸ್ ಅಸೋಸಿಯೇಷನ್‌ ಅಧಿಕಾರಿಗಳಿಗೆ ದೂರು ನೀಡಿತ್ತು. ಡಿಜಿಸಿಎ ಜಂಟಿಕಾರ್ಯದರ್ಶಿ ಲಲಿತ್‌ ಗುಪ್ತಾ, ಅರವಿಂದ್‌ ಅವರ ಈ ಅಪರಾಧವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದ ಪರಿಣಾಮ ಅವರ ಮೇಲೂ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್‌ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...