alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಗಲಿದೆ ನೋಟು ನಿಷೇಧದ ಬಳಿಕ ಪತ್ತೆಯಾದ ಕಪ್ಪು ಹಣದ ಮಾಹಿತಿ

500 ಮತ್ತು 1000 ರೂಪಾಯಿ ನೋಟು ನಿಷೇಧದ ಬಳಿಕ ಪತ್ತೆಯಾಗಿರುವ ಕಪ್ಪುಹಣದ ಬಗ್ಗೆ ವಿವರ ನೀಡುವಂತೆ ಕೇಂದ್ರ ಮಾಹಿತಿ ಆಯೋಗ, ಹಣಕಾಸು ಇಲಾಖೆಗೆ ಸೂಚಿಸಿದೆ. ಒಂದು ವರ್ಷದ ಹಿಂದೆ ಸಲ್ಲಿಸಲಾಗಿದ್ದ ಆರ್ ಟಿ ಐ ಅರ್ಜಿಗೆ ಸಂಬಂಧಪಟ್ಟಂತೆ ಈ ಮಾಹಿತಿಯನ್ನು ಕೇಳಿದೆ.

ಆರ್ ಟಿ ಐ ಅರ್ಜಿಗೆ ಪ್ರತಿಕ್ರಿಯಿಸಲು ವಿಳಂಬವಾಗಿರುವ ಬಗ್ಗೆ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ಕ್ಷಮೆ ಯಾಚಿಸಿದ್ದರಿಂದ ಮಾಹಿತಿ ಆಯೋಗದ ಮುಖ್ಯಸ್ಥ ಆರ್.ಕೆ. ಮಾಥುರ್ ದಂಡ ವಿಧಿಸಿಲ್ಲ. ಭವಿಷ್ಯದಲ್ಲಿ ಈ ರೀತಿ  ವಿಳಂಬ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

30 ದಿನಗಳೊಳಗೆ ಆರ್ ಟಿ ಐ ಅರ್ಜಿಗೆ ಪ್ರತಿಕ್ರಿಯಿಸದೇ ಇದ್ದಲ್ಲಿ ದಂಡ ವಿಧಿಸಲು ಅವಕಾಶವಿದೆ. ಖಾಲಿದ್ ಮುಂಡಪ್ಪಿಳ್ಳೈ ಎಂಬಾತ 2016ರ ನವೆಂಬರ್ 22ರಂದು ಈ ಆರ್ ಟಿ ಐ ಅರ್ಜಿ ಸಲ್ಲಿಸಿದ್ದರು. ಎಷ್ಟು ಕಪ್ಪುಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಕೇಳಿದ್ದರು.

ಈ ಅರ್ಜಿಗೆ 30 ದಿನಗಳೊಳಗೆ ಪ್ರತಿಕ್ರಿಯೆ ಬರಬೇಕಿತ್ತು. ಆದ್ರೆ ಪಿಎಂಓನಿಂದ ರಿಪ್ಲೈ ಬಾರದೇ ಇದ್ದಿದ್ರಿಂದ ಖಾಲಿದ್, 2017ರ ಜನವರಿ 9ರಂದು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...