alex Certify
ಕನ್ನಡ ದುನಿಯಾ       Mobile App
       

Kannada Duniya

ಐಐಟಿ, ಮೆಡಿಕಲ್ ಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ

delhi_university_s_1024_1485931097_749x421

ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ದೊಡ್ಡ ಘೋಷಣೆಗಳನ್ನು ಮಾಡಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲಾಗುವುದೆಂದು ಬಜೆಟ್ ನಲ್ಲಿ ಸರ್ಕಾರ ತಿಳಿಸಿದೆ. ಉನ್ನತ ಶಿಕ್ಷಣ ಸುಧಾರಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಯುಜಿಸಿಯಲ್ಲಿ ಸುಧಾರಣೆ ತರುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಿಗಾಗಿ ಹೊಸ ಏಜೆನ್ಸಿಯನ್ನು ಕೇಂದ್ರ ಸರ್ಕಾರ ಶುರುಮಾಡಲಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮೂಲಕ ಐಐಟಿ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ. ಈವರೆಗೆ ಸಿ ಬಿ ಎಸ್ ಇ, ಈ ಪರೀಕ್ಷೆಗಳನ್ನು ನಡೆಸುತ್ತಿತ್ತು.

ಭಾರತದಲ್ಲಿ 100 ಕೌಶಲ್ಯ ಕೇಂದ್ರಗಳನ್ನು ತೆರೆಯಲಾಗುವುದೆಂದು ಜೇಟ್ಲಿ ಹೇಳಿದ್ದಾರೆ. ಯುವ ಜನತೆಯ ಕೌಶಲ್ಯ ವೃದ್ಧಿಗಾಗಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದ್ರ ಜೊತೆಗೆ  ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. 350 ಆನ್ಲೈನ್ ಪಠ್ಯಕ್ರಮ ಘೋಷಣೆ ಮಾಡಲಾಗಿದೆ.

ಮೆಡಿಕಲ್ ಸೀಟ್ ಕೂಡ ಹೆಚ್ಚಾಗಲಿದೆ. 5 ಸಾವಿರ ಮೆಡಿಕಲ್ ಸೀಟು ಹೆಚ್ಚಾಗಲಿದೆ. ಜೊತೆಗೆ ದೊಡ್ಡ ಆಸ್ಪತ್ರೆಗಳಲ್ಲಿ ಮೆಡಿಕಲ್ ಶಿಕ್ಷಣ ಶುರುಮಾಡುವಂತೆ ಸೂಚಿಸಲಾಗಿದೆ. ಐಟಿಐನಲ್ಲಿ ಇನ್ನಷ್ಟು ಕೋರ್ಸ್ ಗಳು ಸೇರ್ಪಡೆಯಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...