alex Certify
ಕನ್ನಡ ದುನಿಯಾ       Mobile App
       

Kannada Duniya

“ಮೋದಿ ಮೇಲೆ ಚಪ್ಪಲಿ ಎಸೆದ್ರೆ 1 ಲಕ್ಷ ರೂಪಾಯಿ ‘’

ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಮಧ್ಯೆಯೇ ಚಿತ್ರ ನಿರ್ಮಾಪಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂಬೈನ ನಿರ್ಮಾಪಕ ರಾಮ್ ಸುಬ್ರಹ್ಮಣ್ಯಂ ಟ್ವೀಟರ್ ನಲ್ಲಿ ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಚಪ್ಪಲಿ ಎಸೆದ್ರೆ 1 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ.

ಪದ್ಮಾವತಿ ವಿವಾದದಿಂದ ಕೋಪಗೊಂಡಿರುವ ರಾಮ್ ಸುಬ್ರಹ್ಮಣ್ಯಂ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಚಪ್ಪಲಿ ಅಥವಾ ಬೂಟು ಎಸೆದ್ರೆ 1 ಲಕ್ಷ ರೂಪಾಯಿ ನೀಡುತ್ತೇನೆ. ಇದೊಂದು ಹೊಸ ಸಂಸ್ಕೃತಿ ಶುರುವಾಗಿದೆ. ಇದನ್ನು ಬಿಜೆಪಿಯೇ ಆರಂಭಿಸಿದೆ ಎಂದು ರಾಮ್ ಸುಬ್ರಹ್ಮಣ್ಯಂ ಹೇಳಿದ್ದಾರೆ.

ಪದ್ಮಾವತಿ ವಿವಾದವನ್ನು ನೆಪವಾಗಿಟ್ಟುಕೊಂಡು ನಟಿ ದೀಪಿಕಾ ಪಡುಕೋಣೆಗೆ ಅವಮಾನ ಮಾಡಿದ್ದಾರೆ. ನಮ್ಮ ಮನೆ ಮಗಳಿಗೆ ಅವಮಾನ ಮಾಡುವುದು ನಮ್ಮ ಸಂಸ್ಕೃತಿಯೇ ಎಂದು ರಾಮ್ ಸುಬ್ರಹ್ಮಣ್ಯಂ ಪ್ರಶ್ನೆ ಮಾಡಿದ್ದಾರೆ.

ಹರಿಯಾಣ ಬಿಜೆಪಿ ನಾಯಕ ಸೂರತ್ ಪಾಲ್ ದೀಪಿಕಾ ಪಡುಕೋಣೆ ತಲೆ ಕತ್ತರಿಸಿ ತಂದವರಿಗೆ 10 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಸೂರತ್ ಪಾಲ್ ಈ ಹೇಳಿಕೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...