alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮುರಿದು ಬೀಳಲು ಕಾರಣವಾಯ್ತು ರಸಗುಲ್ಲಾ..!

rasagullaವರದಕ್ಷಿಣೆ, ಜಾತಿ-ಧರ್ಮದ ಕಾರಣಕ್ಕಾಗಿ ವಿವಾಹ ಸಮಾರಂಭಗಳು ಅರ್ಧಕ್ಕೆ ನಿಲ್ಲುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಪ್ರಕರಣದಲ್ಲಿ ಒಂದು ರಸಗುಲ್ಲಾಕ್ಕಾಗಿ ಮದುವೆ ಮುರಿದು ಬಿದ್ದಿದೆ. ಇಂತದೊಂದು ವಿಚಿತ್ರ ಪ್ರಕರಣ ನಡೆದಿರುವುದು ಉತ್ತರ ಪ್ರದೇಶದಲ್ಲಿ.

ಲಕ್ನೋದಿಂದ 70 ಕಿ.ಮೀ. ದೂರದಲ್ಲಿರುವ ಕುರ್ಮಾಪುರ್ ಗ್ರಾಮದಲ್ಲಿ ಏಪ್ರಿಲ್ 14 ರಂದು ವಿವಾಹ ಸಮಾರಂಭವೊಂದು ಏರ್ಪಾಟಾಗಿತ್ತು. ವರ ಶಿವಕುಮಾರ್ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದ. ವರನ ಕಡೆಯವರು ಬರುವುದು ಸ್ವಲ್ಪ ತಡವಾದ ಕಾರಣ ವಧುವಿನ ತಂದೆ, ಆಗಮಿಸಿದ್ದ ಇತರೆ ಅತಿಥಿಗಳಿಗೆ ಭೋಜನ ನೀಡಲು ಆರಂಭಿಸಿದ್ದಾರೆ.

ತಡವಾಗಿ ಬಂದ ವರನ ಕಡೆಯವರಿಗೂ ಭೋಜಕ್ಕೆ ಏರ್ಪಾಟು ಮಾಡಿದ್ದು, ಈ ವೇಳೆ ವರನ ಸಹೋದರ ಸಂಬಂಧಿ ಮನೋಜ್ ಎಂಬಾತ ಮತ್ತೊಂದು ರಸಗುಲ್ಲಾ ಹಾಕಲು ಹೇಳಿದ್ದಾನೆ. ಇದಕ್ಕೆ ವಧುವಿನ ಕಡೆಯವನು ಒಬ್ಬರಿಗೆ ಒಂದೇ ರಸಗುಲ್ಲಾ ಬಡಿಸುವಂತೆ ತಮಗೆ ಸೂಚಿಸಲಾಗಿದೆ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಮನೋಜ್ ಮತ್ತಾತನ ಗೆಳೆಯರು ಜಗಳಕ್ಕಿಳಿದಿದ್ದಾರೆ. ಬಿಡಿಸಲು ಬಂದ ವಧುವಿನ ತಂದೆ ಮೇಲೂ ಹಲ್ಲೆ ಮಾಡಿದ್ದಾರೆ.

ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಿರಿಯರು, ವರ ಹಾಗೂ ವಧುವಿನ ಕಡೆಯವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಈ ಮಧ್ಯೆ ತನ್ನ ತಂದೆ ಮೇಲೆ ಹಲ್ಲೆ ನಡೆಸಿದ್ದರಿಂದ ಆಕ್ರೋಶಗೊಂಡ ವಧು ಈ ಮದುವೆ ಬೇಡವೇ ಬೇಡ ಎಂದಿದ್ದಾಳೆ. ಆಗ ವರ ಮತ್ತಾತನ ಕಡೆಯವರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಹಿಂದಿರುಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...