alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಉಚಿತವಾಗಿ ಸಿಗುತ್ತೆ ಕಾಂಡೋಮ್

551542-aids

ಮಾರಕ ರೋಗ ಎಚ್ಐವಿ/ಏಡ್ಸ್ ವಿರುದ್ಧ ಹೋರಾಡಲು ಭಾರತದಲ್ಲೂ ಎನ್ ಜಿ ಓ ಒಂದು ಉಚಿತ ಕಾಂಡೋಮ್ ಮಳಿಗೆಯನ್ನು ಆರಂಭಿಸಿದೆ. ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ ತನ್ನ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾರತದ ಮೊದಲ ಫ್ರೀ ಕಾಂಡೋಮ್ ಸ್ಟೋರ್ ಆರಂಭಿಸಿದೆ.

ಈ ಮಳಿಗೆಯಲ್ಲಿ ಎನ್ ಜಿ ಓಗಳು, ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ಯಾವುದೇ ವ್ಯಕ್ತಿಗಳು ಬೇಕಾದ್ರೂ ಉಚಿತವಾಗಿ ಕಾಂಡೋಮ್ ಪಡೆಯಬಹುದು. ಅತಿಹೆಚ್ಚು ಎಚ್ ಐ ವಿ ಪೀಡಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ 2.1 ಮಿಲಿಯನ್ ಮಂದಿ ಈ ಮಹಾಮಾರಿಯಿಂದ ಬಳಲುತ್ತಿದ್ದಾರೆ.

2016ರಲ್ಲಿ 64,000 ಮಂದಿ ಏಡ್ಸ್ ನಿಂದ ಮೃತಪಟ್ಟಿದ್ದಾರೆ. 2015ಕ್ಕೆ ಹೋಲಿಸಿದ್ರೆ ಈ ಪ್ರಮಾಣ ಕಡಿಮೆಯಾಗಿದೆ. ಎಚ್ ಐ ವಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಎಚ್ಎಫ್ ಉಚಿತ ಕಾಂಡೋಮ್ ವಿತರಿಸುತ್ತಿದೆ. ಫೋನ್ ಅಥವಾ ಇಮೇಲ್ ಮೂಲಕ ಯಾರು ಬೇಕಾದ್ರೂ ಕಾಂಡೋಮ್ ಆರ್ಡರ್ ಮಾಡಬಹುದು. ಅದನ್ನು ಸಂಸ್ಥೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...