alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನು ಥಳಿಸಿದ್ದ ಎಸ್ಐ ಪುತ್ರ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ದೆಹಲಿಯ ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯ ಮೇಲೆ ಹಲ್ಲೆ ಮತ್ತು ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಘಟನೆ ನಿಮಗೆ ನೆನಪಿರಬಹುದು. ಯುವತಿಯ ಕೂದಲು ಹಿಡಿದು ಎಳೆದಾಡುತ್ತಾ ಮನಸೋ ಇಚ್ಚೆ ಥಳಿಸುತ್ತಿರುವ ಯುವಕನನ್ನು ರೋಹಿತ್ ಸಿಂಗ್ ಥೋಮರ್ ಅಂತ ಗುರುತಿಸಲಾಗಿದೆ. ಅಷ್ಟೇ ಅಲ್ಲ ಆತ ದೆಹಲಿಯ ಪೊಲೀಸ್ ಅಧಿಕಾರಿಯ ಮಗ ಅಂತಲೂ ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಬೆಳವಣಿಗೆ ನಡೆದಿದೆ. ಘಟನೆಯಲ್ಲಿ ಹಲ್ಲೆ ಮಾಡಿದ ರೋಹಿತ್ ಸಿಂಗ್ ಥೋಮರ್ ನ ವಿವಾಹ ನಿಶ್ಚಿತಾರ್ಥ ಕಾರ್ಯ ಕೆಲ ತಿಂಗಳ ಹಿಂದೆ ನಡೆದಿತ್ತು. ಈಗ ಆ ಮದುವೆ ಮುರಿದುಬಿದ್ದಿದೆ. ಖುದ್ದು ಮದುವೆ ನಿಶ್ಚಯವಾಗಿದ್ದ ಯುವತಿಯೇ ರೋಹಿತ್ ಸಿಂಗ್ ಥೋಮರ್ ಜೊತೆ ತಾನು ಮದುವೆ ಆಗೋದಿಲ್ಲ ಅಂತ ತಿಳಿಸಿದ್ದಾಳೆ . ಅಷ್ಟೇ ಅಲ್ಲ ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ನೋಡಿದ ಯುವತಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾಳೆ. ಯುವತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಕೇಂದ್ರ ಗೃಹ ಇಲಾಖೆ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಥಳಿತಕ್ಕೊಳಗಾದ ಯುವತಿ ಕೂಡ ಪೊಲೀಸ್ ಠಾಣೆಗೆ ತೆರಳಿ ಈ ಸಂಬಂಧ ದೂರು ದಾಖಲಿಸಿದ್ದಾಳೆ. ಸದ್ಯ ರೋಹಿತ್ ಸಿಂಗ್ ಥೋಮರ್ ನನ್ನ ಬಂಧಿಸಲಾಗಿದ್ದು, ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...