alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ರೀತಿಯಲ್ಲಿ ಸರಗಳ್ಳರನ್ನು ಹಿಡಿದ ಮಹಿಳಾ ಕಂಡಕ್ಟರ್

ಮಹಿಳಾ ಬಸ್ ಕಂಡಕ್ಟರ್ ಒಬ್ಬರು ಚಿನ್ನದ ಚೈನನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಸಿನಿಮೀಯ ರೀತಿಯಲ್ಲಿ ಹಿಡಿದಿರುವ ಘಟನೆ ನಡೆದಿದೆ. ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ ಕಂಡಕ್ಟರ್ ಆಗಿರುವ ಪಿ.ಆರ್. ಸುಜಾ ಎಂಬುವವರೇ ಈ ದಿಟ್ಟ ಮಹಿಳೆ.

ಅಲಪ್ಪುಜಾ ಎಂಬಲ್ಲಿ ಸರಸ್ವತಿ ಎಂಬಾಕೆ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಇಬ್ಬರು ಮಹಿಳೆಯರು ಆಕೆಯ 28 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಕಾರ್ಯನಿರತರಾದ ಕಂಡಕ್ಟರ್ ಸುಜಾ ಬಸ್ ನಿಂದ ಜಿಗಿದು ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಡಿದು ಸರವನ್ನು ವಾಪಸ್ ಕೊಡಿಸಿದ್ದಾರೆ.

ಇದೆಲ್ಲಾ ನಡೆಯುವವರೆಗೂ ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿದ್ದರು ಅಷ್ಟೇ. ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸರಗಳ್ಳರು ಅಂದರ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...