alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್ ಕೌಂಟರ್ ಭಯದಿಂದ ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡ್ತಿದ್ದಾರೆ ಕ್ರಿಮಿನಲ್ ಗಳು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.

ಇದುವರೆಗೂ ರಾಜಕೀಯ ಒತ್ತಡಗಳ ಕಾರಣಕ್ಕಾಗಿ ಕ್ರಿಮಿನಲ್ ಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದ ಪೊಲೀಸರು, ಈಗ ಹೊಸ ಉತ್ಸಾಹ ಪಡೆದುಕೊಂಡಿದ್ದು, ಪಾತಕಿಗಳ ವಿರುದ್ದ ಸಮರ ಸಾರಿದ್ದಾರೆ.

ಗುಂಡಿನ ಭಾಷೆ ಬಲ್ಲವರಿಗೆ ಅದೇ ಭಾಷೆಯ ಮೂಲಕವೇ ಉತ್ತರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು, ಪೊಲೀಸ್ ಕಾರ್ಯಾಚರಣೆ ಸಂದರ್ಭದಲ್ಲಿ ತಿರುಗಿ ನಿಂತಿದ್ದ ಕೆಲ ಪಾತಕಿಗಳು ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಪ್ರಾಣ ಭೀತಿಗೊಳಗಾಗಿರುವ ಆನೇಕ ಪಾತಕಿಗಳು ತಾವು ಪಾತಕ ಲೋಕ ತ್ಯಜಿಸಿ ಶಾಂತಿಯುತ ಜೀವನಕ್ಕೆ ಮರಳಿದ್ದೇವೆಂದು ಬೋರ್ಡ್ ಹಾಕಿಕೊಂಡು ತಿರುಗುವಂತಾಗಿದೆ. ಪೊಲೀಸರೂ ಇದಕ್ಕೆ ಮಾನ್ಯತೆ ನೀಡಿದ್ದು, ಈ ಹೇಳಿಕೆ ಕೇವಲ ತೋರಿಕೆಗೆ ಮಾತ್ರವಾಗಿರಬಾರದು. ನಿತ್ಯ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಒಂದೊಮ್ಮೆ ವ್ಯತಿರಿಕ್ತವಾಗಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...