alex Certify
ಕನ್ನಡ ದುನಿಯಾ       Mobile App
       

Kannada Duniya

ನಿಫಾ ವೈರಸ್ ಎಫೆಕ್ಟ್: ನರ್ಸ್, ವೈದ್ಯರಿಗೆ ಬಹಿಷ್ಕಾರ…!

ಕೇರಳದಲ್ಲಿ ನಿಫಾ ವೈರಸ್ ಅಬ್ಬರ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಒಂದು ಕಡೆ ಸಾವು-ಬದುಕಿನ ಮಧ್ಯೆ ರೋಗಿಗಳು ಹೋರಾಟ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಹಣ್ಣು-ಹಂಪಲು ಖರೀದಿಗೆ ಜನರು ಮುಂದಾಗ್ತಿಲ್ಲ. ಈ ಮಧ್ಯೆ ನಿಫಾ ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್ ಹಾಗೂ ವೈದ್ಯರನ್ನು ಜನರು ಅಸ್ಪೃಶ್ಯರಂತೆ ನೋಡ್ತಿದ್ದಾರೆ.

ಕೋಝಿಕೋಡದಲ್ಲಿರುವ ತಾಲೂಕು ಆಸ್ಪತ್ರೆ ನರ್ಸ್ ಗಳಿಗೆ ಸ್ಥಳೀಯ ಬಸ್ ನಲ್ಲಿ ಜಾಗ ಸಿಗ್ತಿಲ್ಲ. ನರ್ಸ್ ಬಸ್ ಹತ್ತುತ್ತಿದ್ದಂತೆ ಪ್ರಯಾಣಿಕರು ಪ್ರತಿಭಟಿಸಿದ್ದಾರೆ. ಆಟೋ ಚಾಲಕರು ಕೂಡ ನರ್ಸ್ ಗಳಿಗೆ ಡ್ರಾಪ್ ನೀಡುತ್ತಿಲ್ಲ. ಗುರುವಾರ ಶವಾಗಾರದ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸರು ದೂರು ನೀಡಿದ ಘಟನೆ ನಡೆದಿದೆ. ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಸಿಬ್ಬಂದಿ ನಿರಾಕರಿಸಿದ್ದರು ಎನ್ನಲಾಗಿದೆ.

ನಿಫಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಹಾಗೂ ಅವ್ರ ಸೇವೆ ಮಾಡ್ತಿರುವವರ ಹತ್ತಿರ ಬರಲು ಉಳಿದ ರೋಗಿಗಳು ನಿರಾಕರಿಸುತ್ತಿದ್ದಾರೆ. ಆದ್ರೆ ಮೊದಲಿಗಿಂತ ಆತಂಕ ಕಡಿಮೆಯಾಗಿದೆ ಎನ್ನಲಾಗ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...