alex Certify
ಕನ್ನಡ ದುನಿಯಾ       Mobile App
       

Kannada Duniya

14 ವರ್ಷದಲ್ಲಿ 237 ಕೆ.ಜಿ ತೂಕವೇರಲು ಕಾರಣವೇನು ಗೊತ್ತಾ?

ದೆಹಲಿಯ ಮಿಹಿರ್ ಜೈನ್ ವಯಸ್ಸು ಕೇವಲ 14 ವರ್ಷ. ಇವನ ತೂಕ ಮಾತ್ರ 237 ಕೆ.ಜಿ. ವಿಶ್ವದ ಅತ್ಯಂತ ದಪ್ಪಗಿನ ವ್ಯಕ್ತಿ ಎಂದೇ ಕರೆಯಿಸಿಕೊಳ್ತಿರುವ ಜೈನ್ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಮೊದಲಿಗಿಂತ ಈಗ ಅವನ ಸ್ಥಿತಿ ಸುಧಾರಿಸಿದೆ ಎನ್ನಲಾಗ್ತಿದೆ.

ಏಪ್ರಿಲ್ ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಈಗ ಜೈನ್ ತೂಕ 172 ಕೆ.ಜಿ ಗೆ ಇಳಿದಿದೆ. ಶಸ್ತ್ರ ಚಿಕಿತ್ಸೆ ನಂತ್ರ ಯಾರ ಸಹಾಯವೂ ಇಲ್ಲದೆ ಜೈನ್ ನಡೆಯುವಷ್ಟು ಶಕ್ತನಾಗಿದ್ದಾನೆ. ಬಾಲ್ಯದಲ್ಲಿ ಸಾಮಾನ್ಯ ಮಕ್ಕಳಂತೆ ಇದ್ದ ಜೈನ್ ಜಂಕ್ ಫುಡ್ ಹಾಗೂ ಕೋಲ್ಡ್ ಡ್ರಿಂಕ್ಸ್ ಹೆಚ್ಚಾಗಿ ಸೇವನೆ ಮಾಡ್ತಿದ್ದ, ಇದು ಆತನ ತೂಕ ಹೆಚ್ಚಾಗಲು ಮುಖ್ಯ ಕಾರಣವಾಯ್ತು.

ಐದು ವರ್ಷದಲ್ಲಿಯೇ ಜೈನ್ ತೂಕ 87 ಕೆ.ಜಿಯಾಗಿತ್ತು. ಎದ್ದೇಳಲು ಕಷ್ಟಪಡ್ತಿದ್ದ ಜೈನ್ ತೂಕ 14 ವರ್ಷಕ್ಕೆ 237 ಕೆ.ಜಿಯಾಯ್ತ. ಮಿಹಿರ್ ಪಾಸ್ತಾ ಹಾಗೂ ಪಿಜ್ಜಾವನ್ನು ಹೆಚ್ಚು ತಿನ್ನುತ್ತಿದ್ದನಂತೆ. ಒಂದನೇ ತರಗತಿ ನಂತ್ರ ಸ್ಕೂಲ್ ಬಿಟ್ಟಿದ್ದ ಮಿಹಿರ್ ಗೆ ತಾಯಿಯೇ ವಿದ್ಯಾಭ್ಯಾಸ ಹೇಳಿಕೊಡ್ತಿದ್ದಳಂತೆ.

ಆರೋಗ್ಯ ವೃದ್ಧಿಗೆ ವ್ಯಾಯಾಮ, ಆಟ ಹಾಗೂ ಉತ್ತಮ ಆಹಾರ ಎಷ್ಟು ಮುಖ್ಯ ಎಂಬುದು ಮಿಹಿರ್ ಗೆ ಈಗ ಅರ್ಥವಾಗಿದೆ. ತೂಕ ಇಳಿಸಿಕೊಳ್ಳಲು ಏನೂ ಬೇಕಾದ್ರೂ ಮಾಡಲು ಸಿದ್ದ ಎಂದಿದ್ದಾನೆ. ವ್ಯಾಯಾಮ ಶುರು ಮಾಡಿದ್ದಾನೆ. ಆತನಿಗೆ ಡಯಟ್ ಫುಡ್ ನೀಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...