alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಮಲಕ್ಕೆ ಗನ್ ತಂದಿದ್ದ ತಂದೆ-ಮಗ ಅರೆಸ್ಟ್

gun

ಬಂದೂಕು ಹಾಗೂ ಮದ್ದುಗುಂಡು ತಂದಿದ್ದ ತಂದೆ- ಮಗನನ್ನು ತಿರುಮಲದಲ್ಲಿ ಬಂಧಿಸಲಾಗಿದೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ನಡೆದಿದೆ. ಆಗಸ್ಟ್ 2ರಂದು ಪುಣೆ ಮೂಲದ ವ್ಯಕ್ತಿಯೊಬ್ಬ ಗನ್ ಹಾಗೂ 12 ಮದ್ದುಗುಂಡುಗಳನ್ನು ತಂದು ಸಿಕ್ಕಿಬಿದ್ದಿದ್ದ.

ಮಹಾರಾಷ್ಟ್ರ ಮೂಲದ ತಂದೆ- ಮಗ MH 04 FA 3443 ಕಾರಿನಲ್ಲಿ ಬಂದಿದ್ರು. ಗನ್ ಅನ್ನು ಸೀಟಿನಡಿ ಅಡಗಿಸಿಟ್ಟಿದ್ರು. ಬಂದೂಕಿನಲ್ಲಿ 6 ಬುಲೆಟ್ ಗಳನ್ನು ಲೋಡ್ ಮಾಡಿಡಲಾಗಿತ್ತು. ಅಲಿಪಿರಿ ಟೋಲ್ ಗೇಟ್ ಬಳಿ ಸುಧಾಕರ್ ಗಣ್ಪತ್ ಕುಡು ಮತ್ತಾತನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ತಂದೆ- ಮಗನನ್ನು ವಶಕ್ಕೆ ಪಡೆದು 5 ಗಂಟೆಗಳ ನಂತರ ಅಲಿಪಿರಿ ಚೆಕ್ ಪೋಸ್ಟ್ ನಲ್ಲಿ 8 ಬುಲೆಟ್ ಗಳು ಪತ್ತೆಯಾಗಿವೆ. ಅವು ಕೂಡ ಬಂಧಿತರ ಬಳಿಯಿದ್ದ ಬುಲೆಟ್ ಅನ್ನೇ ಹೋಲುತ್ತಿವೆ. ಪೊಲೀಸರಿಗೆ ಸಿಕ್ಕಿಬೀಳಬಹುದೆಂಬ ಭಯದಲ್ಲಿ ತಂದೆ- ಮಗ ಅವನ್ನು ಹೊರಕ್ಕೆ ಬಿಸಾಡಿರಬಹುದು ಅಂತಾ ಶಂಕಿಸಲಾಗಿದೆ.

ತಿರುಮಲದಲ್ಲಿ ಯಾರೂ ಗನ್ ಹಾಗೂ ಶಸ್ತ್ರಾಸ್ತ್ರಗಳನ್ನು ತರುವಂತಿಲ್ಲ. ಲೈಸನ್ಸ್ ಇರುವ ಪಿಸ್ತೂಲ್ ಇದ್ರೆ ಅದನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿ ಹೋಗಬೇಕು. ಆದ್ರೆ ಬಂಧಿತ ಸುಧಾಕರ್, ಗನ್ ಅನ್ನು ಮಹಾರಾಷ್ಟ್ರದಲ್ಲಿ ಮಾತ್ರ ಬಳಸಲು ಲೈಸನ್ಸ್ ಹೊಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...