alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳಮುಖಿ ಮೇಲೆ ಮಗನ ಪ್ರೀತಿ: ವಿಷ್ಯ ಗೊತ್ತಾಗಿ ತಂದೆ ಮಾಡಿದ್ದೇನು?

ಮಗ ಮಂಗಳಮುಖಿಯ ಪ್ರೀತಿಗೆ ಬಿದ್ದಿದ್ದ. ಇದು ತಂದೆಗೆ ಇಷ್ಟವಾಗಲಿಲ್ಲ. ಕೋಪಗೊಂಡ ತಂದೆ ಸಾರ್ವಜನಿಕರ ಜೊತೆ ಸೇರಿ ಮಂಗಳ ಮುಖಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ದಕ್ಷಿಣ ದೆಹಲಿಯ ಶಹಪುರ್ ಜಾಟ್ ಗ್ರಾಮದಲ್ಲಿ ನಡೆದಿದೆ.

ಮಂಗಳಮುಖಿ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಪ್ರೇಮಿ ಭೇಟಿಗೆ ಶಹಪುರ್ ಜಾಟ್ ಗೆ ಬಂದಿದ್ದಳು. ಈ ವಿಷ್ಯ ಯುವಕನ ತಂದೆಗೆ ಗೊತ್ತಾಗಿದೆ. ಆತ ಸ್ಥಳೀಯರ ಜೊತೆ ಸೇರಿ ಮಂಗಳ ಮುಖಿಯರನ್ನು ತಡೆದಿದ್ದಾನೆ. ಇದೇ ವಿಚಾರಕ್ಕೆ ಎರಡೂ ಗುಂಪಿನ ಮಧ್ಯೆ ಗಲಾಟೆ ಶುರುವಾಗಿದೆ. ಕೋಪಗೊಂಡ ಮಂಗಳಮುಖಿಯರು ಬಟ್ಟೆ ಬಿಚ್ಚಿದ್ದಾರೆ. ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

ಕೃಷ್ಣ ಜನ್ಮಾಷ್ಠಮಿಯಂದು ಇಬ್ಬರು ಕೊನೆಯದಾಗಿ ಭೇಟಿ ಮಾಡಿದ್ದರು. ತಂದೆ ಆದೇಶದ ಮೇರೆಗೆ ಯುವಕ, ಮಂಗಳಮುಖಿ ಜೊತೆ ಮಾತು ಬಿಟ್ಟಿದ್ದ. ಇದ್ರಿಂದ ಬೇಸರಗೊಂಡ ಮಂಗಳಮುಖಿ ಶಹಪರ್ ಜಾಟ್ ಗೆ ಬಂದಿದ್ದಳು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದು, ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...