alex Certify
ಕನ್ನಡ ದುನಿಯಾ       Mobile App
       

Kannada Duniya

ಥರಗುಟ್ಟೋ ಚಳಿಯಲ್ಲಿ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹೋದ

ಹೆಣ್ಣು ಮಕ್ಕಳ ರಕ್ಷಣೆಗೆ ದೇಶದಾದ್ಯಂತ ಅನೇಕ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದ್ರೆ ಹೆಣ್ಣು ಮಕ್ಕಳ ರಕ್ಷಣೆ ಮಾತ್ರ ಪೂರ್ಣ ಪ್ರಮಾಣದಲ್ಲಾಗುತ್ತಿಲ್ಲ. ಹೆಣ್ಣು ಭ್ರೂಣ ಹತ್ಯೆ ಜೊತೆಗೆ ಹೆಣ್ಣು ಮಕ್ಕಳ ಪಾಲಕರು ಮಕ್ಕಳನ್ನೇ ಬಲಿ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ.

ನೋಯ್ಡಾ ರಸ್ತೆಯಲ್ಲಿ ನಿಷ್ಕರುಣಿ ತಂದೆಯೊಬ್ಬ 6 ತಿಂಗಳ ಹೆಣ್ಣು ಮಗುವನ್ನು ಹತ್ಯೆಗೈಯ್ಯಲು ಮುಂದಾಗಿದ್ದಾನೆ. ರಸ್ತೆ ಮೇಲೆ ಎರಡು ವಾಹನಗಳ ಮಧ್ಯೆ ಮಗುವನ್ನು ಮಲಗಿಸಿದ್ದಾನೆ. ಅದೃಷ್ಟವಶಾತ್ ಮಗು ಬದುಕುಳಿದಿದೆ. ಗುರುವಾರ ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಸೆಕ್ಟರ್ 12-ಕೆ ಬ್ಲಾಕ್ ನ ರಸ್ತೆಯಲ್ಲಿ ಎರಡು ಕಾರುಗಳ ಮಧ್ಯೆ ಮಗುವೊಂದು ಕಾಣಿಸಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ವಿಷ್ಯ ತಿಳಿಸಿದ್ದಾರೆ. ಮಗು ಅನಾಥೆ. ಆಕೆಗೆ ಯಾರೂ ಇಲ್ಲ ಎಂಬ ಪತ್ರವೊಂದು ಮಗು ಬಳಿ ಸಿಕ್ಕಿದೆ.

ಮಗುವನ್ನು ವಶಕ್ಕೆ ಪಡೆದ ಪೊಲೀಸರು ಮಕ್ಕಳ  ಕಲ್ಯಾಣ ಸಮಿತಿಗೆ ನೀಡಿದ್ದಾರೆ. ಶುಕ್ರವಾರ ಈಶ್ವರ್ ಎಂಬಾತ ಮಗುವಿನ ಅಜ್ಜ ನಾನೆಂದು ಪೊಲೀಸ್ ಠಾಣೆಗೆ ಬಂದಿದ್ದಾನೆ. ಮಗನಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿವೆ. ಮಗ ದೆಹಲಿಯಲ್ಲಿ ವಾಸವಾಗಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಮಗ ಹೀಗೆ ಮಾಡಿದ್ದಾನೆಂದು ಈಶ್ವರ್ ಹೇಳಿದ್ದಾನೆ. ಆದ್ರೆ ಮಗುವನ್ನು ಆತನ ಕೈಗೆ ನೀಡಲು ನಿರಾಕರಿಸಿದ ಪೊಲೀಸರು ಮಗುವಿನ ತಂದೆ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...