alex Certify ಮದುವೆ ಮನೆಯಲ್ಲಿ ಅಪ್ಪ-ಮಗಳ ನೃತ್ಯಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ಅಪ್ಪ-ಮಗಳ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವುದು ಈಗ ಸಾಮಾನ್ಯವಾಗಿದೆ. ನೃತ್ಯ, ಸಂಗೀತವಿಲ್ಲದ ಮದುವೆ ಅಪೂರ್ಣ ಎನಿಸುವಂತಿದ್ದು, ಅವುಗಳ ಪೈಕಿ ಕೆಲವೊಂದು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ತಂದೆ ಮತ್ತು ಮಗಳು ಜೋಡಿಯ ನೃತ್ಯ ಮಾಡುವುದನ್ನು ನೋಡಬಹುದು.

ಈ ವಿಡಿಯೋವನ್ನು ಶಾದಿಬಿಟಿಎಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಪ್ಪ-ಮಗಳ ನೃತ್ಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದಾಗಲೇ ವಿಡಿಯೋ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿ ʼಕಾರ್ತಿಕ್ ಕಾಲಿಂಗ್ ಕಾರ್ತಿಕ್ʼ ಚಿತ್ರದ ʼಉಫ್ ತೇರಿ ಅದಾʼ ಹಾಡಿಗೆ ಅಪ್ಪ-ಮಗಳು ನೃತ್ಯ ಮಾಡಿದ್ದಾರೆ. ಇಬ್ಬರ ಅದ್ಭುತ ನೃತ್ಯಕ್ಕೆ ನೆರೆದವರು ಚಪ್ಪಾಳೆ ಹೊಡೆಯುತ್ತಿದ್ದರೆ, ಈ ಜೋಡಿ ಇನ್ನೂ ಜೋಶ್​ನಿಂದ ಹೆಜ್ಜೆ ಹಾಕುವುದನ್ನು ನೋಡಬಹುದು. ಈ ಅಪ್ಪ-ಮಗಳನ್ನು ದೀಪಕ್​ ಬನ್ಸಾಲ್​ ಮತ್ತು ಮಗಳು ರುಚಿಕಾ ಬನ್ಸಾಲ್​ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...