alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಚಟಕ್ಕೆ ಬಿದ್ದಿದ್ದ ಮಗನಿಗೆ ಇಂಥಾ ಶಿಕ್ಷೆ…!

ಮೊಬೈಲ್ ಚಟಕ್ಕೆ ಬಿದ್ದಿದ್ದ ಮಗನ ಬಲಗೈಯನ್ನೇ ಕತ್ತರಿಸಿದ ತಂದೆಯನ್ನು ಹೈದ್ರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. 45 ವರ್ಷದ ಮೊಹಮ್ಮದ್ ಖಯ್ಯೂಮ್ ಖುರೇಷಿ ಬಂಧಿತ ವ್ಯಕ್ತಿ. ಈತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ಮೊಹಮ್ಮದ್ ನ ಮಗ ಖಾಲಿದ್ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡ್ತಾ ಇದ್ದ. ಅವನಿಗೆ ಮೊಬೈಲ್ ನಲ್ಲಿ ಸಿನೆಮಾ ಹಾಗೂ ಪೋರ್ನ್ ವಿಡಿಯೋಗಳನ್ನು ನೋಡುವ ಹುಚ್ಚಿದ್ದು, ದಿನವಿಡೀ ಅದರಲ್ಲೇ ಕಾಲ ಕಳೆಯುತ್ತಿದ್ದ. ತಾನು ದುಡಿದ ಹಣವನ್ನೆಲ್ಲ ಅದಕ್ಕಾಗಿಯೇ ಖರ್ಚು ಮಾಡ್ತಿದ್ದ.

ಆ ಚಟವನ್ನು ಬಿಟ್ಟುಬಿಡುವಂತೆ ಹಲವು ಬಾರಿ ತಂದೆ ವಾರ್ನ್ ಮಾಡಿದ್ದರೂ ಖಾಲಿದ್ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್, ಮಗ ಮಲಗಿದ್ದಾಗ ಅವನ ಬಲಗೈಯ್ಯನ್ನೇ ಕತ್ತರಿಸಿ ಹಾಕಿದ್ದಾನೆ. ಕೈಯ್ಯನ್ನು ಮರುಜೋಡಣೆ ಮಾಡುವುದು ಅಸಾಧ್ಯ ಎನ್ನಲಾಗ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...