alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಯನ್ನು ಭೇಟಿಯಾಗಲು ಹೋದವ ಹೆಣವಾದ

boy_murder_gzb_650_082616080519ಗೆಳತಿಯನ್ನು ಭೇಟಿಯಾಗಲು ಹೋದ ಪ್ರೇಮಿಯೊಬ್ಬನನ್ನು ಆಕೆಯ ತಂದೆ ಹಾಗೂ ಸಹೋದರ 11 ನೇ ಮಹಡಿಯಿಂದ ಎಸೆದು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ನೊಯ್ಡಾದ ವರುಣ್ ರಜಪೂತ್ ಎಂಬುವನೇ ಹತ್ಯೆಗೀಡಾದ ಯುವಕ. ವರುಣ್, ಗಾಜಿಯಾಬಾದ್ ನ ಇಂದಿರಾಪುರದಲ್ಲಿರುವ ಆದಿತ್ಯ ಮೆಗಾಸಿಟಿ ಅಪಾರ್ಟ್ ಮೆಂಟ್ ನ 11 ನೇ ಮಹಡಿಯಲ್ಲಿದ್ದ ಗೆಳತಿಯ ಮನೆಗೆ ಹೋಗಿದ್ದಾನೆ.

ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಹಾಗೂ ಸಹೋದರ ಆತನನ್ನು 11 ನೇ ಮಹಡಿಯಿಂದ ತಳ್ಳಿದ್ದಾರೆ. ಇದರಿಂದಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವರುಣ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಹಾಗೂ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ವರುಣ್ ಸಾವಿನ ಸುತ್ತ ಅನೇಕ ಅನುಮಾನಗಳು ಸುತ್ತಿಕೊಂಡಿವೆ. ಹಾಗಾಗಿ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಯುವತಿಯ ತಂದೆ ಹಾಗೂ ಸಹೋದರನೇ ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...