alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಶೋನಿಂದ ಪ್ರಭಾವಿತಳಾಗಿ ತಂದೆ ಮೇಲೆ ರೇಪ್ ಕೇಸ್

ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿದ್ದ ತಂದೆಯನ್ನು ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿದೆ. ಮಗಳ ಹೇಳಿಕೆ ಆಧಾರದ ಮೇಲೆ ತಂದೆಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಮಗಳು ತಂದೆ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು. ಆದ್ರೆ ವಿಚಾರಣೆ ವೇಳೆ ಮಾತು ಬದಲಿಸಿದ್ದಾಳೆ.

ಹಿಂದಿನ ವರ್ಷ ಸೆಪ್ಟೆಂಬರ್ ನಲ್ಲಿ 11 ವರ್ಷದ ಹುಡುಗಿಯೊಬ್ಬಳು ತಂದೆ ವಿರುದ್ಧ ಅತ್ಯಾಚಾರದ ದೂರು ನೀಡಿದ್ದಳು. ಎನ್ ಜಿ ಓ ನೆರವಿನ ಮೇರೆಗೆ ಹುಡುಗಿಗೆ ರಕ್ಷಣೆ ಕೂಡ ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಹುಡುಗಿ ಹೇಳಿಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ತಾಯಿ ಹಾಗೂ ಮಗಳ ಹೇಳಿಕೆಯೇ ಕೋರ್ಟ್ ಗೆ ಸಾಕ್ಷಿಯಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ಹುಡುಗಿ ತಂದೆಯನ್ನು ತಪ್ಪು ತಿಳಿದಿದ್ದೆ ಎಂದಿದ್ದಾಳೆ. ತಂದೆ ಪ್ರೀತಿಯಿಂದ ಮುತ್ತು ನೀಡುತ್ತಿದ್ದರು. ಆದ್ರೆ ಅದನ್ನೇ ಅತ್ಯಾಚಾರವೆಂದು ನಂಬಿದ್ದೆ ಎಂದಿದ್ದಾಳೆ. ಸಾವದಾನ್ ಇಂಡಿಯಾ ಶೋವನ್ನು ಹುಡುಗಿ ವೀಕ್ಷಣೆ ಮಾಡುತ್ತಿದ್ದಳಂತೆ. ಅದ್ರಲ್ಲಿ ತಂದೆಯನ್ನು ವಿಲನ್ ರೂಪದಲ್ಲಿ ತೋರಿಸಿದ್ದರಂತೆ. ಸದಾ ತಾಯಿ ಜೊತೆ ಜಗಳವಾಡ್ತಿದ್ದ ತಂದೆಗೆ ಬುದ್ದಿಕಲಿಸಲು ಈಕೆ ಹೀಗೆ ಮಾಡಿದ್ದಳಂತೆ. ತಾಯಿ ಕೂಡ ಮಗಳ ಹೇಳಿಕೆ ನಂಬಿ ಈ ರೀತಿ ಮಾಡಿದೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...