alex Certify
ಕನ್ನಡ ದುನಿಯಾ       Mobile App
       

Kannada Duniya

ವೇಗವಾಗಿ ಚಾರ್ಜ್ ಆಗುವ ಸ್ಮಾರ್ಟ್ ಫೋನ್ ಗಳ ಪಟ್ಟಿ

fastest-charging-smartphones-you-can-buy

ಈಗಂತೂ ಸ್ಮಾರ್ಟ್ ಫೋನ್ ಗಳ ಯುಗ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ರಾರಾಜಿಸುತ್ತವೆ. ಆದರೆ ಏನು ಮಾಡುವುದು? ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ. ಇದರಿಂದಾಗುವ ಚಡಪಡಿಕೆ ಅಷ್ಟಿಷ್ಟಲ್ಲ.

ಇಂಟರ್ ನೆಟ್, ಗೂಗಲ್, ಫೇಸ್ ಬುಕ್, ವಾಟ್ಸಾಪ್ ಹೀಗೆ ಅಂಗೈನಲ್ಲೇ ಪ್ರಪಂಚ ನೋಡಬಹುದಾದ ಪ್ರಸ್ತುತ ಸಂದರ್ಭದಲ್ಲಿ ಅಂಡ್ರಾಯಿಡ್ ಹಾಗೂ ಐಓಎಸ್ ಫೋನ್ ಗಳಲ್ಲಿ ಬ್ಯಾಟರಿ ಬ್ಯಾಕ್ ಅಪ್ ಕಾಪಾಡಿಕೊಳ್ಳುವುದೇ ಸವಾಲಿನ ಕೆಲಸ. ನಾವು ಬಳಸುತ್ತಿದ್ದ ಅಪ್ಲಿಕೇಷನ್ಸ್ ಆಫ್ ಆದಂತೆ ಅನಿಸಿದರೂ ಬ್ಯಾಕ್ ಗ್ರೌಂಡ್ ನಲ್ಲಿ ಅಪ್ಲಿಕೇಷನ್ಸ್ ರನ್ ಆಗುತ್ತಿರುತ್ತವೆ. ಹೀಗಾಗಿ ಬಹುಬೇಗ ಬ್ಯಾಟರಿ ಖಾಲಿಯಾಗುತ್ತದೆ ಎಂದು ಗೊಣಗುವುದು ಮಾಮೂಲಿಯಾಗಿ ಬಿಟ್ಟಿದೆ.

ಈ ಬ್ಯಾಟರಿ ಸಮಸ್ಯೆ ಕುರಿತಂತೆ ಅಮೆರಿಕಾದ ಟಾಮ್ಸ್ ಹಾರ್ಡ್ ವೇರ್ ಎಂಬ ಸಂಸ್ಥೆ ಅಧ್ಯಯನ ನಡೆಸಿದೆ. ಅದರಂತೆ,  ಹೆಚ್ಚು ಜನಪ್ರಿಯ ಸ್ಮಾರ್ಟ್ ಫೋನ್ ಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಆಪಲ್ ಐ ಫೋನ್ 6, ಸ್ಯಾಮ್ ಸಂಗ್ ಗ್ಯಾಲಕ್ಸಿ 6, ಒನ್ ಪ್ಲಸ್ 2, ಆಸೂಸ್ ಝೆನ್ ಫೋನ್ 2, ಎಲ್ ಜಿ ಜಿ4, ಮೊಟೋರೊಲ ಡ್ರಾಯಿಡ್ ಟರ್ಬೋ, ಗೂಗಲ್ ನೆಕ್ಸಸ್ 6, ಈ ಫೋನ್ ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಮೊದಲ ಐದು ನಿಮಿಷದಲ್ಲಿ ಆಪಲ್ ಐ ಫೋನ್ 6 ಶೇ. 6ರಷ್ಟು, ಸ್ಯಾಮ್ ಸಂಗ್ ಗ್ಯಾಲಕ್ಸಿ 6 ಶೇ.11 ರಷ್ಟು, ಒನ್ ಪ್ಲಸ್ 2 ಶೇ. 12ರಷ್ಟು,ಆಸೂಸ್ ಝೆನ್ ಫೋನ್ 2 ಶೇ. 17ರಷ್ಟು, ಎಲ್ ಜಿ ಜಿ 4 ಶೇ.11 ರಷ್ಟು, ಮೊಟೋರೊಲ ಡ್ರಾಯಿಡ್ ಟರ್ಬೋ ಶೇ. 11ರಷ್ಟು, ಗೂಗಲ್ ನೆಕ್ಸಸ್ ಸಿಕ್ಸ್ 6 ಶೇ. 12ರಷ್ಟು ಚಾರ್ಜ್ ಆಗಿದೆ.

15 ನಿಮಿಷದಲ್ಲಿ ಆಸೂಸ್ ಝೆನ್ ಪೋನ್ 2 ಶೇ.32 ರಷ್ಟು, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 6 ಶೇ.27ರಷ್ಟು, ಗೂಗಲ್ ನೆಕ್ಸಸ್ 6 ಶೇ.25 ರಷ್ಟು, ಎಲ್ ಜಿ ಜಿ 4 ಶೇ.23 ರಷ್ಟು, ಮೊಟೊರೊಲ ಡ್ರಾಯಿಡ್ ಟರ್ಬೋ ಶೇ.22ರಷ್ಟು, ಒನ್ ಪ್ಲಸ್ 2 ಶೇ.20ರಷ್ಟು, ಆಪಲ್ ಐ ಫೋನ್ 6 ಶೇ.20ರಷ್ಟು ಚಾರ್ಜ್ ಆಗುತ್ತವೆ.

30 ನಿಮಿಷ ಅವಧಿಯಲ್ಲಿ ಆಸೂಸ್ ಝೆನ್ ಪೋನ್ 2 ಶೇ.53 ರಷ್ಟು, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 6 ಶೇ.53ರಷ್ಟು, ಗೂಗಲ್ ನೆಕ್ಸಸ್ 6 ಶೇ.44 ರಷ್ಟು, ಎಲ್ ಜಿ ಜಿ 4 ಶೇ.42 ರಷ್ಟು, ಮೊಟೊರೊಲ ಡ್ರಾಯಿಡ್ ಟರ್ಬೋ ಶೇ.38ರಷ್ಟು, ಒನ್ ಪ್ಲಸ್ 2 ಶೇ.34ರಷ್ಟು, ಆಪಲ್ ಐ ಫೋನ್ 6 ಶೇ.36ರಷ್ಟು ಚಾರ್ಜ್ ಆಗುತ್ತವೆ.

ಈ ಎಲ್ಲಾ ಫೋನ್ ಗಳು ಶೇ. 80 ರಷ್ಟು ಚಾರ್ಜ್ ಆಗಲು ತೆಗೆದುಕೊಂಡ ಸಮಯ ಇಂತಿದೆ. ಆಸೂಸ್ ಝೆನ್ ಪೋನ್ 2, 56 ನಿಮಿಷ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 6 48 ನಿಮಿಷ, ಗೂಗಲ್ ನೆಕ್ಸಸ್ 6  ಒಂದು ಗಂಟೆ, ಎಲ್ ಜಿ ಜಿ 4 ಒಂದು ಗಂಟೆ ಎರಡು ನಿಮಿಷ, ಮೊಟೊರೊಲ ಡ್ರಾಯಿಡ್ ಟರ್ಬೋ-ಒಂದು ಗಂಟೆ 12 ನಿಮಿಷ, ಒನ್ ಪ್ಲಸ್ 2 ಒಂದು ಗಂಟೆ 25 ನಿಮಿಷ, ಆಪಲ್ ಐ ಫೋನ್ 6 ಒಂದು ಗಂಟೆ 15 ನಿಮಿಷಗಳಲ್ಲಿ ಚಾರ್ಜ್ ಆಗಲಿವೆ.

ಈ ಎಲ್ಲಾ ಫೋನ್ ಗಳು ಶೇ. 100ರಷ್ಟು ಚಾರ್ಜ್ ಆಗಲು ತೆಗೆದುಕೊಂಡ ಸಮಯ ಇಂತಿದೆ. ಆಸೂಸ್ ಝೆನ್ ಪೋನ್ 2 ಒಂದು ಗಂಟೆ 49 ನಿಮಿಷ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 6 ಒಂದು ಗಂಟೆ 22 ನಿಮಿಷ, ಗೂಗಲ್ ನೆಕ್ಸಸ್ 6 ಒಂದು ಗಂಟೆ, ಎಲ್ ಜಿ ಜಿ 4 ಒಂದು ಗಂಟೆ 36 ನಿಮಿಷ, ಮೊಟೊರೊಲ ಡ್ರಾಯಿಡ್ ಟರ್ಬೋ-ಒಂದು ಗಂಟೆ 47ನಿಮಿಷ, ಒನ್ ಪ್ಲಸ್ 2 ಎರಡು ಗಂಟೆ 10 ನಿಮಿಷ,  ಆಪಲ್ ಐ ಫೋನ್ 6 ಎರಡು ಗಂಟೆ 35 ನಿಮಿಷಗಳಲ್ಲಿ ಚಾರ್ಜ್ ಆಗಿವೆ ಎಂಬುದು ಅಧ್ಯನದ ಸಂದರ್ಭದಲ್ಲಿ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...