alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ಹೆಣ್ಣು ಮಕ್ಕಳಿಗೆ ವಿಲನ್ ಆದ ಫ್ಯಾಷನ್ ಡಿಸೈನರ್ ತಂದೆ

ಮುಂಬೈನ ವಕೋಲಾದಲ್ಲಿ 42 ವರ್ಷದ ಫ್ಯಾಷನ್ ಡಿಸೈನರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಎಂಬ ದೂರಿನ ಮೇಲೆ ಆತನನ್ನು ಬಂಧಿಸಲಾಗಿದೆ. 17 ವರ್ಷದ ಹಿರಿಯ ಮಗಳು ಹಾಗೂ 13 ವರ್ಷದ ಕಿರಿಯ ಮಗಳಿಗೆ ಫ್ಯಾಷನ್ ಡಿಸೈನರ್ ಲೈಂಗಿಕ ಕಿರುಕುಳ ನೀಡ್ತಿದ್ದನಂತೆ.

ಹಿರಿಯ ಮಗಳು 11ನೇ ತರಗತಿಯಲ್ಲಿ ಓದುತ್ತಿದ್ದು, ತಾಯಿಗೆ ವಿಷ್ಯ ತಿಳಿಸಿದ್ದಾಳೆ. ಪತ್ನಿ ಈ ಬಗ್ಗೆ ಪ್ರಶ್ನೆ ಮಾಡ್ತಿದ್ದಂತೆ ಪತಿ ಕೆಟ್ಟ ಶಬ್ಧಗಳಿಂದ ಪತ್ನಿಯನ್ನು ನಿಂದಿಸಿದ್ದಾನೆ. ಪತ್ನಿ ಮಕ್ಕಳ ಜೊತೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಕಳೆದ 2 ವರ್ಷಗಳಿಂದ ತಂದೆ ಲೈಂಗಿಕ ಕಿರುಕುಳ ನೀಡ್ತಿದ್ದಾನೆ. ತಾಯಿಗೆ ಹೇಳಿದ್ರೆ ಶಿಕ್ಷಣ ನಿಲ್ಲಿಸಿ, ಮನೆಯಿಂದ ಹೊರ ಹಾಕುವುದಾಗಿ ಬೆದರಿಸಿದ್ದಾನೆಂದು 11 ವರ್ಷದ ಹುಡುಗಿ ದೂರಿದ್ದಾಳೆ.

ಕಳೆದ ನವೆಂಬರ್ ನಲ್ಲಿ ಕಿರಿಯ ಮಗಳ ಮೇಲೆ ಅತ್ಯಾಚಾರವೆಸಗಲು ತಂದೆ ಯತ್ನಿಸಿದ್ದಾನೆ ಎನ್ನಲಾಗಿದೆ. ಏಪ್ರಿಲ್ 8ರಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಏಪ್ರಿಲ್ 12ರವರೆಗೆ ಕೋರ್ಟ್ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ವಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...