alex Certify
ಕನ್ನಡ ದುನಿಯಾ       Mobile App
       

Kannada Duniya

ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ

onion priceಬರದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಈಗಾಗಲೇ ನೂರಾರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಪ್ರದೇಶಗಳಲ್ಲಿ ಜನ- ಜಾನುವಾರುಗಳಿಗೆ ಕುಡಿಯಲು ನೀರೂ ಸಿಗದ ಪರಿಸ್ಥಿತಿ ಇದೆ. ಈ ಮಧ್ಯೆ ರೈತರಿಗೆ ಮತ್ತೊಂದು ಬರಸಿಡಿಲು ಬಂದೆರಗಿದೆ.

ಈರುಳ್ಳಿ ಬೆಳೆದು ಜೀವಾನೋಪಾಯಕ್ಕಾಗಿ ಸ್ವಲ್ಪ ಹಣವನ್ನಾದರೂ ಗಳಿಸಬಹುದೆಂಬ ಲೆಕ್ಕಾಚಾರದಲ್ಲಿದ್ದ ರೈತರಿಗೆ, ಈರುಳ್ಳಿ ಧಾರಣೆ ಪಾತಾಳಕ್ಕಿಳಿದಿರುವುದು ತೀವ್ರ ಆಘಾತವನ್ನುಂಟು ಮಾಡಿದೆ. ಕೆ.ಜಿ. ಈರುಳ್ಳಿ 50 ಪೈಸೆಗೆ ಮಾರಾಟವಾದ ಬಗ್ಗೆಯೂ ವರದಿಯಾಗಿದೆ.

ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಮರಾಠವಾಡದ ಲಾಸೂರ್ ಮಾರುಕಟ್ಟೆಯಲ್ಲಿ ಈರುಳ್ಳಿ ಈ ಧಾರಣೆಗೆ ಮಾರಾಟವಾಗಿದ್ದು, ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 5 ರಿಂದ 6 ರೂಪಾಯಿಗೆ ಮಾರಾಟವಾಗಿದೆ.ಈರುಳ್ಳಿ ಬೆಳೆಯಲು ಎಕರೆಗೆ 50 ಸಾವಿರದಿಂದ 80 ಸಾವಿರ ರೂ. ವರೆಗೆ ವೆಚ್ಚ ತಗುಲುತ್ತಿದ್ದು, ಈಗ ಸಿಗುತ್ತಿರುವ ಧಾರಣೆಯಿಂದ ರೈತರು ತೀವ್ರ ನಷ್ಟವನ್ನನುಭವಿಸುತ್ತಿದ್ದಾರೆ. ಈರುಳ್ಳಿ ಕೊಳೆಯದಂತೆ ರಕ್ಷಿಸಲು ಶೀಥಲೀಕೃತ ಗೋದಾಮುಗಳಿಲ್ಲದಿರುವುದೇ ಬೆಲೆ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ. ಸರ್ಕಾರ ಬೆಂಬಲ ಬೆಲೆ ನೀಡಿ ಈರುಳ್ಳಿ ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...