alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಚ್ಚ ನೀರಿಗಾಗಿ ಪರಿತಪಿಸುತ್ತಿದ್ದಾರೆ ಇಲ್ಲಿನ ಜನ

ಬೇಸಿಗೆ ಆರಂಭವಾಯಿತೆಂದರೆ ಸಾಕು ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಮಧ್ಯಪ್ರದೇಶದ ಚತಾರ್ ಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. ಸಿಗುವ ಅಲ್ಪ ಸ್ವಲ್ಪ ನೀರೂ ಸಹ ಅತ್ಯಂತ ಕೊಳಕಾಗಿದ್ದು, ಬಟ್ಟೆಯಿಂದ ಸೋಸಿ ಕುಡಿಯುವ ಪರಿಸ್ಥಿತಿ ಇದೆ.

ಇನ್ನು ನೀರು ಸಿಗದೇ ಹಾಗೂ ಅಲ್ಪ ಸ್ವಲ್ಪವೇ ಸಿಗುವ ನೀರಿನಿಂದಾಗಿ ದನಕರುಗಳೂ ಸಹ ಬಡಕಲಾಗಿ ಹೋಗಿದ್ದು, ನೇಗಿಲನ್ನೂ ಸಹ ಮನುಷ್ಯರೇ ಎಳೆಯುವ ಸ್ಥಿತಿ ಬಂದಿದೆ. ಇನ್ನು ನೀರಿನ ಅಭಾವದಿಂದಾಗಿ ಮದುವೆ ಮುಂತಾದ ಕಾರ್ಯಗಳು ನಡೆಯುವುದು ಕಷ್ಟವಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಹಾಗೂ ಎಂಜಿನಿಯರಿಂಗ್ ವಿಭಾಗದ ಉಪ ವಿಭಾಗಾಧಿಕಾರಿ ಅಜಝ್ ಖಾನ್, ನಮಗೀಗ 600 ಮೀಟರ್ ಆಳದಲ್ಲಿ ನೀರು ಸಿಗುತ್ತಿದೆ. ಬಾವಿಗಳಿಗೆ ನೀರು ಸ್ವಚ್ಚವಾಗಿ ಬರುವಂಥ ಪಂಪ್ ಅಳವಡಿಸುತ್ತೇವೆ. ಅಲ್ಲದೇ ಆಯ್ದ ಕೈಪಂಪುಗಳನ್ನು ಹಾಕುವುದಾಗಿಯೂ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...