alex Certify
ಕನ್ನಡ ದುನಿಯಾ       Mobile App
       

Kannada Duniya

7 ರಾಜ್ಯಗಳಲ್ಲಿ ರೈತರ ಪ್ರತಿಭಟನೆ: ರಸ್ತೆಯಲ್ಲಿ ಹಾಲು, ತರಕಾರಿ ಎಸೆದು ಆಕ್ರೋಶ

ಪಂಜಾಬ್, ಮಧ್ಯಪ್ರದೇಶ ಸೇರಿದಂತೆ 7 ರಾಜ್ಯಗಳ ರೈತರ ಪ್ರತಿಭಟನೆ ಜೂನ್ 1ರಿಂದ ಶುರುವಾಗಿದೆ. ರೈತರ ಯೂನಿಯನ್ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ 10 ದಿನಗಳ ಪ್ರತಿಭಟನೆಗೆ ಕರೆ ನೀಡಿದೆ. ಮಧ್ಯಪ್ರದೇಶದ ಮಂದಸೌರ್ ರೈತರು ತರಕಾರಿ ಹಾಗೂ ಹಾಲನ್ನು ನಗರದಿಂದ ಹೊರಗೆ ಕಳುಹಿಸುವುದಿಲ್ಲವೆಂದು ಸೂಚನೆ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪುಣೆಯಲ್ಲಿ ರೈತರು 40 ಸಾವಿರ ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಂದಸೌರ್ ನಲ್ಲಿ ಪ್ರತಿಭಟನೆಗೂ ಮುನ್ನ ದೇವಸ್ಥಾನಕ್ಕೆ ತೆರಳಿದ ಪ್ರತಿಭಟನಾಕಾರರು ದೇವರಿಗೆ ಹಾಲಿನ ಅಭಿಷೇಕ ಮಾಡಿಸಿದ್ರು.

ರಾಷ್ಟ್ರೀಯ ರೈತರ ಒಕ್ಕೂಟ 130 ಸಂಘಟನೆ ಜೊತೆ ಸೇರಿ ಮುಷ್ಕರಕ್ಕೆ ಕರೆ ನೀಡಿದೆ. ಆಗ್ರಾದ ಟೋಲ್ ಮೇಲೆ ದಾಳಿ ನಡೆಸಿದ ರೈತರು ಹಿಂಸಾಚಾರ ನಡೆಸಿದ್ದಾರೆ. ಕೆಲ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ರೈತರ ಮುಷ್ಕರದಿಂದಾಗಿ ದಿನನಿತ್ಯದ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಕಳೆದ ವರ್ಷ ಮಂದಸೌರ್ ನಲ್ಲಿ ಮುಷ್ಕರ ನಡೆಸಿದ್ದ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...