alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಗೋ ಮುನ್ನ ಹಾಸಿಗೆ ಕೆಳಗೆ ಚೆಕ್ ಮಾಡಿ, ಇಲ್ಲದಿದ್ರೆ….

ಪ್ರತಿದಿನ ಮಲಗುವ ಮುನ್ನ ನಿಮ್ಮ ಹಾಸಿಗೆ ಕೆಳಗೆ ಏನಿದೆ ಅನ್ನೋದನ್ನು ಪರೀಕ್ಷಿಸಲು ಮರೆಯಬೇಡಿ. ಯಾಕಂದ್ರೆ ನಿಮಗೆ ಕೂಡ ಹರ್ ಪ್ರಸಾದ್ ಗೆ ಅದಂತಹ ಭಯಾನಕ ಅನುಭವ ಆಗಬಹುದು. ಈತ ಉತ್ತರ ಪ್ರದೇಶದ ಅಲಿಗಢದಲ್ಲಿರೋ ನನೌ ಗ್ರಾಮದವರು.

ನಿನ್ನೆ ತಡರಾತ್ರಿ 12 ಗಂಟೆಗೆ ಹಾಸಿಗೆ ಅಡಿ ಏನೋ ಸದ್ದಾದಂತಾಗಿತ್ತು, ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ವು. ಹರ್ ಪ್ರಸಾದ್ ಗೆ ಎಚ್ಚರವಾಗಿತ್ತು. ಲೈಟ್ ಹಾಕಿ ನೋಡಿದ್ರೆ ಭಾರೀ ಗಾತ್ರದ ಮೊಸಳೆಯೊಂದು ಹಾಸಿಗೆ ಅಡಿ ಮಲಗಿತ್ತು. ಕೂಡಲೇ ಹರ್ ಪ್ರಸಾದ್ ಸಹಾಯಕ್ಕಾಗಿ ಅಕ್ಕಪಕ್ಕದವರನ್ನು ಕೂಗಿ ಕರೆದಿದ್ದಾರೆ.

ಎಲ್ಲರೂ ಸೇರಿ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಹಾಕಿದ್ರು. ಬೆಳಗ್ಗೆ ಆಗಮಿಸಿದ ಅರಣ್ಯಾಧಿಕಾರಿಗಳು ಮೊಸಳೆಯನ್ನು ಸಮೀಪದ ಸರೋವರಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ. ಮೊಸಳೆ ಸುಮಾರು 2 ವರ್ಷ ಪ್ರಾಯದ್ದು ಅಂತಾ ತಿಳಿಸಿದ್ದಾರೆ.

ಹರ್ ಪ್ರಸಾದ್ ಹೊಲದ ಮಧ್ಯೆಯೇ ಮನೆ ಮಾಡಿಕೊಂಡಿದ್ದರು. ರಾತ್ರಿ ವರಾಂಡಾದಲ್ಲೇ ಮಲಗಿಕೊಂಡಿದ್ದರು. ದಾರಿ ತಪ್ಪಿ ಬಂದ ಮೊಸಳೆ ಮನೆಯೊಳಕ್ಕೆ ಸೇರಿಕೊಂಡು ಬಿಟ್ಟಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...