alex Certify
ಕನ್ನಡ ದುನಿಯಾ       Mobile App
       

Kannada Duniya

1 ಟನ್ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು 1 ರೂಪಾಯಿ

onion 34890ಬರಗಾಲದಿಂದ ಮೊದಲೇ ತತ್ತರಿಸಿರುವ ರೈತರಿಗೆ ತಾವು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಗೂ ಬಿಡಿಗಾಸು ಸಿಗುತ್ತಿರುವುದು ಬರ ಸಿಡಿಲು ಬಂದೆರೆಗಿದಂತಾಗಿದೆ. ಅದರಲ್ಲೂ ಈರುಳ್ಳಿ ದರ ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿರುವುದರಿಂದ ಈರುಳ್ಳಿ ಬೆಳೆದ ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಮಹಾರಾಷ್ಟ್ರದ ದೇವಿದಾಸ್ ಪರ್ಬಾನೆ ಎಂಬ 48 ವರ್ಷದ ರೈತ ಪುಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ತಾವು ಬೆಳೆದಿದ್ದ ಈರುಳ್ಳಿಯನ್ನು ಮಾರಿದ್ದು, ಅವರಿಗೆ 1 ಟನ್ ಗೆ ಕೇವಲ 1 ರೂಪಾಯಿ ಸಿಕ್ಕಂತಾಗಿದೆ. ಹೀಗಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳದೇ ಮತ್ತೇನೂ ಮಾಡಲು ಸಾಧ್ಯ ಎಂದು ಅವರು ಅಸಹಾಯಕತೆಯಿಂದ ಪ್ರಶ್ನಿಸುತ್ತಾರೆ.

ದೇವಿದಾಸ್ ಪರ್ಬಾನೆಯವರಿಗೆ 2 ಎಕರೆ ಭೂಮಿಯಿದ್ದು, ಸುಮಾರು 80 ಸಾವಿರ ರೂ. ವೆಚ್ಚ ಮಾಡಿ ಈರುಳ್ಳಿ ಬೆಳೆದಿದ್ದರು. ಮೇ 10 ರಂದು 952 ಕೆ.ಜಿ. ಈರುಳ್ಳಿಯನ್ನು 18 ಚೀಲಗಳಲ್ಲಿ ತುಂಬಿ ಪುಣೆಯ ಎಪಿಎಂಸಿ ಮಾರುಕಟ್ಟೆಗೆ ಕಳುಹಿಸಿಕೊಟ್ಟಿದ್ದರು. ಅವರಿಂದ ತಲಾ 10 ಕೆ.ಜಿ. ಈರುಳ್ಳಿಯನ್ನು 16 ರೂ. ಗಳಂತೆ ಖರೀದಿಸಲಾಗಿದೆ. ಅಂದರೆ ಕೆ.ಜಿ. ಗೆ 1.60 ರೂ. ಸಿಕ್ಕಂತಾಗಿದೆ. ಅವರು ಕಳುಹಿಸಿದ್ದ ಈರುಳ್ಳಿಗೆ ಒಟ್ಟು 1,523.20 ರೂ. ಸಿಕ್ಕಿದ್ದು, ಕಮೀಷನ್ 91.35 ರೂ. ಕಡಿತಗೊಂಡಿದೆ. ಲೋಡಿಂಗ್ ಮತ್ತು ಅನ್ ಲೋಡಿಂಗ್ ಗೆ 59 ರೂ. ಹಾಗೂ 18.55 ರೂ. ನೀಡಿದ್ದು, ಇತರೆ ವೆಚ್ಚ 33.30 ರೂ. ತಗುಲಿದೆ. ಸಾಗಾಟ ಮಾಡಿದ ಟ್ರಕ್ ಬಾಡಿಗೆಯಾಗಿ 1,320 ರೂ. ಪಾವತಿಸಿದ್ದು, ಇದೆಲ್ಲ ಖರ್ಚು ಕಳೆದ ಬಳಿಕ ಅವರಿಗೆ ಸಿಕ್ಕಿರುವುದು ಕೇವಲ 1 ರೂಪಾಯಿ ಮಾತ್ರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...