alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಫೇವರಿಟ್ ಹಾಟ್ ಡ್ರಿಂಕ್ಸ್, ಇವರ ಗದ್ದೆಗೆ ಕೀಟನಾಶಕ..!

drink

ಕೋಕ್, ಪೆಪ್ಸಿ ಸೇರಿದಂತೆ ಹಲವು ತಂಪು ಪಾನೀಯಗಳು ಆರೋಗ್ಯಕ್ಕೆ ಮಾರಕ ಅನ್ನೋದು ಇತ್ತೀಚೆಗೆ ಬಯಲಾಗಿತ್ತು. ಹಾಗಾಗಿ ಕೆಲವು ಕಡೆಗಳಲ್ಲಿ ಈ ಕೂಲ್ ಡ್ರಿಂಕ್ಸ್ ಅನ್ನೇ ಕೀಟನಾಶಕವಾಗಿ ಬಳಸಲಾಗ್ತಿದೆ. ಕೆಲವರು ತಮ್ಮ ಟಾಯ್ಲೆಟ್ ಕ್ಲೀನ್ ಮಾಡಲು ಅದನ್ನು ಬಳಸಿದ್ರೆ, ಇನ್ನು ಕೆಲವರು ಹೊಲಗದ್ದೆಗಳಿಗೆ ಸಿಂಪಡಿಸ್ತಿದ್ದಾರೆ.

drinks

ಬರೀ ತಂಪು ಮಾನೀಯ ಮಾತ್ರವಲ್ಲ ಮದ್ಯ ಕೂಡ ರೈತರ ಪಾಲಿಗೆ ಕೀಟನಾಶಕವಾಗಿ ಮಾರ್ಪಟ್ಟಿದೆ. ಜೈಪುರದ ರೈತರೆಲ್ಲ ಲೋಕಲ್ ಸಾರಾಯಿ ಹಾಗೂ ಇಂಪೋರ್ಟೆಡ್ ಬ್ರಾಂಡ್ ನ ಮದ್ಯವನ್ನೆಲ್ಲ ತಮ್ಮ ಹೊಲಗದ್ದೆಗಳಿಗೆ ಸಿಂಪಡಿಸ್ತಿದ್ದಾರೆ.

ಎರಡು ಬೇರೆ ಬೇರೆ ರೀತಿಯ ಮದ್ಯವನ್ನು ಬೆರೆಸಿ ಸಿಂಪಡಿಸಿದ್ರೆ ಬೆಳೆಗೆ ಕೀಟಬಾಧೆ ಇರುವುದಿಲ್ಲವಂತೆ. ಹುಳಗಳು ಹತ್ತಿರಕ್ಕೂ ಸುಳಿಯೋದಿಲ್ಲ ಎನ್ನುತ್ತಾರೆ ರೈತರು.

ಜೊತೆಗೆ ಕೀಟನಾಶಕಕ್ಕಿಂತ ಮದ್ಯ ದುಪ್ಪಟ್ಟು ಪರಿಣಾಮಕಾರಿಯಾಗಿದೆ. ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ, ಈಗ ಅದನ್ನು ಬೆಳೆಗಳಿಗೂ ಸಿಂಪಡಿಸ್ತಾ ಇರೋದು ಕೊಂಚ ಆತಂಕಕ್ಕೂ ಕಾರಣವಾಗಿದೆ. ಆದ್ರೆ ಇಂಪೋರ್ಟೆಡ್ ಮದ್ಯ ಸಖತ್ ದುಬಾರಿಯಾಗಿರೋದ್ರಿಂದ ಎಲ್ಲಾ ರೈತರು ಅದನ್ನು ಕೀಟನಾಶಕವಾಗಿ ಬಳಸೋದು ಅಸಾಧ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...