alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತು 30 ವರ್ಷಗಳಾದ್ಮೇಲೆ ಬಂತು ತೆರಿಗೆ ವಂಚನೆ ನೋಟಿಸ್

ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಅನ್ನೋದಕ್ಕೆ ಇದೊಂದು ತಾಜಾ ನಿದರ್ಶನ. ಖ್ಯಾತ ಹಿಂದಿ ಸಾಹಿತಿಯೊಬ್ಬರಿಗೆ ಸತ್ತು 30 ವರ್ಷಗಳಾದ್ಮೇಲೆ ತೆರಿಗೆ ವಂಚನೆ ನೋಟಿಸ್ ಬಂದಿದೆ.

ಅಲಹಾಬಾದ್ ನಿವಾಸಿಯಾಗಿದ್ದ ಲೇಖಕಿ ಮಹಾದೇವಿ ವರ್ಮಾ ಮೃತಪಟ್ಟು 30 ವರ್ಷಗಳೇ ಕಳೆದಿವೆ. ಆದ್ರೆ ಆಕೆ ಮನೆ ತೆರಿಗೆ ಕಟ್ಟಿಲ್ಲವೆಂದು ಈಗ ದಿ ಅಲಹಾಬಾದ್ ನಗರ್ ನಿಗಮ್ ನೋಟಿಸ್ ಕಳಿಸಿದೆ.

ಅಶೋಕ ನಗರದ ಮನೆ ನಂಬರ್ 327/114ರ 48,050 ರೂಪಾಯಿ ತೆರಿಗೆ ಬಾಕಿ ಇದೆ ಅಂತಾ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಮಹಾದೇವಿ ವರ್ಮಾ ಹಿಂದಿಯ ಪ್ರಖ್ಯಾತ ಲೇಖಕಿ.

ಅವರ ಜೀವಮಾನ ಸಾಧನೆಗಾಗಿ 1979ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ದೊರೆತಿತ್ತು. ನಂತರ 1982ರಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ನೀಡಿ ಗೌರವಿಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...