alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಡ್ಜ್ ನಲ್ಲಿ ದೆವ್ವದ ಕಾಟಕ್ಕೆ ಬೆಚ್ಚಿ ಬಿದ್ರು ಪ್ರವಾಸಿಗರು..!

hyder

ಹೈದರಾಬಾದ್: ಪ್ರವಾಸಕ್ಕೆ ಬಂದು ಹೈದರಾಬಾದ್ ಲಾಡ್ಜ್ ನಲ್ಲಿ ತಂಗಿದ್ದ ಇಬ್ಬರಿಗೆ, ದೆವ್ವ ಕಾಟ ಕೊಟ್ಟ ನಂಬಲಸಾಧ್ಯ ಘಟನೆ ವರದಿಯಾಗಿದೆ.

ಮುಂಬೈ ಮೂಲದ 60 ವರ್ಷದ ಸೈಯದ್ ಮುಷ್ತಾಕ್, ಅವರ ಪುತ್ರರಾದ ಹಬೀಬ್, ಅಶ್ವಕ್ ಮತ್ತು ಕುಟುಂಬದವರು ಸೇರಿ 8 ಮಂದಿ ಚಾರ್ ಮಿನಾರ್ ಸಮೀಪದ ಲಾಡ್ಜ್ ನಲ್ಲಿ ತಂಗಿದ್ದಾರೆ.

ಎಲ್ಲರೂ ನಿದ್ದೆ ಮಾಡುವಾಗ, ರಾತ್ರಿ 12.30 ರ ಸುಮಾರಿಗೆ ಸೈಯದ್ ಮುಷ್ತಾಕ್ ಮತ್ತು ಅವರ ಪುತ್ರ ಹಬೀಬ್ ಮೇಲೆ ದೆವ್ವ ದಾಳಿ ಮಾಡಿದೆ ಎನ್ನಲಾಗಿದೆ. ಇಬ್ಬರೂ ಜೋರಾಗಿ ಕಿರುಚಿ ದೆವ್ವ ಹೊಡೆದು, ತಮ್ಮನ್ನು ಗೋಡೆಗೆ ನೂಕಿದೆ ಎಂದು ವಿಚಿತ್ರವಾಗಿ ವರ್ತಿಸಿದ್ದಾರೆ.

ಇವರ ವರ್ತನೆಯಿಂದ ಗಾಬರಿಯಾದ ಕುಟುಂಬ ಸದಸ್ಯರು ಪೊಲೀಸರಿಗೆ, ಲಾಡ್ಜ್ ನ ಸಿಬ್ಬಂದಿಗೆ ತಿಳಿಸಿದ್ದಾರೆ. ಹೊರಗಿನಿಂದ ಯಾರೂ ಬರಲು ಸಾಧ್ಯವಾಗಿಲ್ಲದ ಕಾರಣ, ದೆವ್ವವೇ ಇರಬಹುದೇನೋ ಎಂದು ಆತಂಕಗೊಂಡಿದ್ದಾರೆ.

ಆದರೆ, ಪರಿಶೀಲನೆ ನಡೆಸಿದಾಗ, ಹಲ್ಲೆ ಮಾಡಿದ ಯಾವ ಕುರುಹು ಕಂಡು ಬಂದಿಲ್ಲ. ಕೊನೆಗೆ ಸೈಯದ್ ಫ್ಯಾಮಿಲಿ ಬೇರೆ ಲಾಡ್ಜ್ ನಲ್ಲಿ ತಂಗಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಆದರೂ ಸೈಯದ್ ಕುಟುಂಬದವರು.ಪೊಲೀಸರಿಗೆ ದೂರು ನೀಡಿ, ಹೇಳದೇ, ಕೇಳದೇ ಮುಂಬೈಗೆ ತೆರಳಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...