alex Certify
ಕನ್ನಡ ದುನಿಯಾ       Mobile App
       

Kannada Duniya

ಬುರಾರಿಯಂತೆ ರಾಂಚಿಯಲ್ಲಿ ಆತ್ಮಹತ್ಯೆಗೆ ಶರಣಾದ 7 ಮಂದಿ

ಜಾರ್ಖಂಡದಲ್ಲಿ ಸಾಮೂಹಿಕ ಆತ್ಮಹತ್ಯೆಯ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಕಾಂಕೆ ಠಾಣಾ ವ್ಯಾಪ್ತಿಯ ರಸಂಡೆಯಲ್ಲಿ ಘಟನೆ ನಡೆದಿದೆ. ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಮೃತರೆಲ್ಲ ಭಾಗಲ್ಪುರದ ದೀಪಕ್ ಝಾ ಕುಟುಂಬದವರು ಎನ್ನಲಾಗಿದೆ. ನಿವೃತ್ತ ಸೇನಾಧಿಕಾರಿ ಕುಟುಂಬಸ್ಥರು ಇವರೆಲ್ಲ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಇವ್ರು ಮನೆ ಬದಲಿಸಿದ್ದರಂತೆ. ಕೆಲ ದಿನಗಳ ಹಿಂದೆ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರಂತೆ. ಅಚಾನಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣದ ಹುಡುಕಾಟ ನಡೆಯುತ್ತಿದೆ.

ದೀಪಕ್ ಝಾ ಮಗಳು ಶಾಲೆಗೆ ಹೋಗುತ್ತಿದ್ದಳಂತೆ. ಬೆಳಿಗ್ಗೆ ಸ್ಕೂಲ್ ವ್ಯಾನ್ ಮನೆ ಮುಂದೆ ಬಂದು ಹಾರ್ನ್ ಮಾಡಿದೆ. ಎಷ್ಟು ಹಾರ್ನ್ ಮಾಡಿದ್ರೂ ಹುಡುಗಿ ಬರಲಿಲ್ಲ. ಮನೆ ಮಾಲೀಕ ಮನೆ ಬಳಿ ಹೋದಾಗ ಸತ್ಯ ಗೊತ್ತಾಗಿದೆ. ಮನೆಯವರೆಲ್ಲ ರಾತ್ರಿ ಚೆನ್ನಾಗಿಯೇ ಇದ್ರು. ಯಾವುದೇ ಗಲಾಟೆ, ಜಗಳದ ಶಬ್ಧ ಕೇಳಲಿಲ್ಲ ಎಂದು ಅಕ್ಕಪಕ್ಕದವರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...