alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ 23 ಮೊಟ್ಟೆಗಳನ್ನಿಟ್ಟ ಹಾವಿನ ವಿಡಿಯೋ

ಹಾವುಗಳನ್ನು ಕಂಡರೇನೇ ಭಯವಾಗುತ್ತೆ. ಅಂತದ್ರಲ್ಲಿ ವಿಷಪೂರಿತ ನಾಗರಹಾವು ಮನೆ ಪ್ರವೇಶಿಸಿದರೆ ಅಲ್ಲಿದ್ದವರ ಪರಿಸ್ಥಿತಿ ಏನಾಗಿರಬೇಡ.

ಇಂತದ್ದೇ ಪರಿಸ್ಥಿತಿಯನ್ನು ಒಡಿಶಾದ ಕುಟುಂಬವೊಂದು ಎದುರಿಸಿದೆ. ಮನೆಯೊಳಗಿದ್ದ ನಾಗರಹಾವನ್ನು ಕಂಡು ಗಾಬರಿ ಬಿದ್ದ ಕುಟುಂಬಸ್ಥರು ಹಾವು ಹಿಡಿಯುವವರನ್ನು ಸಂಪರ್ಕಿಸಿದ್ದಾರೆ.

ಮನೆಯೊಳಗೆ ಹಾವಿರುವ ವಿಚಾರ ರಾಜ್ಯದ ಸ್ನೇಕ್ ಹೆಲ್ಪ್ ಲೈನ್ ಗೂ ತಲುಪಿದೆ. ಹೆಲ್ಪ್ ಲೈನ್ ಸಿಬ್ಬಂದಿ ಹಾವು ಹಿಡಿಯುವವರಿಗೆ ಅದನ್ನು ಹಿಡಿದ ಬಳಿಕ ಕಾಡಿಗೆ ಬಿಡದಂತೆ ಸೂಚಿಸಿದ್ದಾರೆ.

ಈ ಹಾವು ಮೊಟ್ಟೆ ಇಡುವ ಕಾಲ ಸನ್ನಿಹಿತವಾಗಿದ್ದ ಹಿನ್ನಲೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಬಳಿಕ ಈ ಹಾವು 23 ಮೊಟ್ಟೆಗಳನ್ನಿಟ್ಟಿದೆ ಎನ್ನಲಾಗಿದೆ. ಈ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...