alex Certify
ಕನ್ನಡ ದುನಿಯಾ       Mobile App
       

Kannada Duniya

ಇಡೀ ಕುಟುಂಬಕ್ಕೇ ಇದೆ ವಿಚಿತ್ರ ಸಮಸ್ಯೆ

finger

ಒಂದೇ ಕುಟುಂಬದ ಹಲವರಲ್ಲಿ ಶಾರೀರಿಕ ವಿರೂಪಗಳು ಕಾಣಿಸಿಕೊಂಡ ಉದಾಹರಣೆಗಳಿವೆ. ಆದ್ರೆ ಇಂತಹ ಪ್ರಕರಣಗಳು ಬಹಳ ಅಪರೂಪ. ಕೇರಳದ ಕುಟುಂಬವೊಂದು ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಕುಟುಂಬದಲ್ಲಿ 84 ವರ್ಷದ ಹಿರಿಯಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ ಎಲ್ಲರಿಗೂ ಕೈ ಬೆರಳುಗಳು ಪರಸ್ಪರ ಅಂಟಿಕೊಂಡಿವೆ.

ಸಿಂಡಕ್ಟಲಿ ಎಂಬ ಈ ಶಾರೀರಿಕ ಊನಕ್ಕೆ ಪರಿಹಾರವಿದೆ. ಶಸ್ತ್ರಚಿಕಿತ್ಸೆ ಮೂಲಕ ಇದನ್ನು ಸರಿಪಡಿಸಬಹುದು. ಆದ್ರೆ ಇದೊಂದು ವೈದ್ಯಕೀಯ ಸಮಸ್ಯೆ ಅನ್ನೋ ಅರಿವು ಆ ಕುಟುಂಬದವರಿಗೆ ಇಲ್ಲ. ಇದೆಲ್ಲಾ ದೇವರ ಮಾಯೆ ಎನ್ನುತ್ತಾರೆ ಕುಟುಂಬದ ಸದಸ್ಯರು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಕುಟುಂಬಕ್ಕೆ ದುರಾದೃಷ್ಟ ಬರಬಹುದು ಅನ್ನೋದು ಅವರ ಆತಂಕ.

ಬೆರಳುಗಳು ಅಂಟಿಕೊಂಡಿದ್ರೂ ಅವರಿಗೆ ದೈನಂದಿನ ಕೆಲಸ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಸುಮಾರು 90 ವರ್ಷಗಳಿಂದ ಕುಟುಂಬದವರಲ್ಲಿ ಈ ರೀತಿ ಶಾರೀರಿಕ ಊನವಿದೆ. ತಲೆಮಾರಿನಿಂದ ತಲೆಮಾರಿಗೆ ಅದು ಮುಂದುವರಿಯುತ್ತಲೇ ಇದೆ. ಈ ರೀತಿಯ ಬೆರಳುಗಳು ತಮಗೊಂದು ಹೆಮ್ಮೆ ಎನ್ನುತ್ತಾರೆ ಅವರು.

ಪವಿತ್ರವಾದ ವನದಲ್ಲಿ ಕುಟುಂಬದವರ್ಯಾರೋ ಮರ ಕಡಿದಿದ್ದರಿಂದ ಈ ಸಮಸ್ಯೆ ಶುರುವಾಗಿದೆ ಅನ್ನೋದು ಅವರ ನಂಬಿಕೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವನೊಬ್ಬ ನಂತರ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿದ್ದನಂತೆ. ಹಾಗಾಗಿ ಉಳಿದವರು ಕೂಡ ಚಿಕಿತ್ಸೆ ಪಡೆಯಲು ಭಯಪಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...