alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತ ಬಾಲಕಿಯ ಮದುವೆ ಮಾಡಿಸಲು ಮಾಡಿದ್ರು ಖತರ್ನಾಕ್ ಪ್ಲಾನ್

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಅಪ್ರಾಪ್ತ ಬಾಲಕಿಯ ನಕಲಿ ಆಧಾರ್ ಕಾರ್ಡ್ ತಯಾರಿಸಿ ಮದುವೆ ಮಾಡಲು ಕುಟುಂಬಸ್ಥರು ಯತ್ನಿಸಿದ್ದಾರೆ. ಬಾಲಕಿಗೆ ಕೇವಲ 11 ವರ್ಷ. ಆದ್ರೆ 18 ವರ್ಷವಾಗಿದೆ ಅಂತಾ ನಮೂದಿಸಿ ನಕಲಿ ಆಧಾರ್ ಕಾರ್ಡ್ ತಯಾರಿಸಿದ್ದರು.

ಸಾಮಾಜಿಕ ಕಾರ್ಯಕರ್ತರು, ಶಾಲೆಯ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಮದುವೆಯಿಂದ ಬಚಾವ್ ಮಾಡಿದ್ದಾರೆ. ತಾನು ಶೀಘ್ರದಲ್ಲೇ ಮದ್ವೆಯಾಗ್ತಿದ್ದೇನೆ ಅನ್ನೋ ವಿಚಾರವನ್ನು ಬಾಲಕಿ ಶಿಕ್ಷಕರ ಬಳಿ ಹೇಳಿದ್ದಳು.

ಕೂಡಲೇ ಆಕೆಯ ತಾಯಿಯನ್ನು ಶಾಲೆಗೆ ಕರೆಸಿದ ಶಿಕ್ಷಕರು, ಬಾಲ್ಯ ವಿವಾಹ ಅಪರಾಧ ಅನ್ನೋದನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಆದ್ರೆ ಆಕೆ ಅದನ್ನು ಕಿವಿಗೇ ಹಾಕಿಕೊಂಡಿಲ್ಲ. ಮದುವೆ ತಡೆಯಲು ಮುಂದಾದ ಸಾಮಾಜಿಕ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು.

ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಬಾಲಕಿಯ ಮನೆಗೆ ತೆರಳಿದ ಅಧಿಕಾರಿಗಳು ಅವಳನ್ನು ರಕ್ಷಣೆ ಮಾಡಿದ್ದಾರೆ. 20 ವರ್ಷ ವಯಸ್ಸಿನ ಸಹೋದರಿ ಜೊತೆಗೆ 11 ವರ್ಷದ ಬಾಲಕಿಯ ಮದುವೆಯನ್ನೂ ಒಟ್ಟಿಗೇ ಮಾಡಿ ಮುಗಿಸಿ ಖರ್ಚು ಉಳಿಸಲು ಕುಟುಂಬಸ್ಥರು ಪ್ಲಾನ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...