alex Certify
ಕನ್ನಡ ದುನಿಯಾ       Mobile App
       

Kannada Duniya

ಭಾಗ್ಯಶಾಲಿ ನಾಯಿ ಸಾವಿಗೆ ಕಣ್ಣೀರಿಟ್ಟ ಕುಟುಂಬ

img-20170111-wa0043_14841

ಉತ್ತರ ಪ್ರದೇಶದ ಸಿಹೋರಯಲ್ಲಿ ಪ್ರಾಣಿ ಹಾಗೂ ಮಾನವನ ನಡುವಿರುವ  ಭಾವನಾತ್ಮಕ ಸಂಬಂಧಕ್ಕೊಂದು ಉದಾಹರಣೆ ಸಿಕ್ಕಿದೆ. ಸಾಕು ನಾಯಿ ಸಾವು ಇಡೀ ಕುಟುಂಬದ ದುಃಖಕ್ಕೆ ಕಾರಣವಾಗಿದೆ. ಮನುಷ್ಯರ ರೀತಿಯಲ್ಲಿಯೇ ನಾಯಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಸಿಹೋರ್ನ ಗಂಜ್ ಪ್ರದೇಶದಲ್ಲಿ ವಾಸವಾಗಿರುವ ರಾಮ್ಬೊರೋಸ್ ರಾಥೋಡ್ ಮನೆಯಲ್ಲಿ ಅನೇಕ ವರ್ಷಗಳಿಂದ ನಾಯಿಯೊಂದು ಮನೆಯ ಸದಸ್ಯರಲ್ಲೊಂದಾಗಿತ್ತು. ಬುಧವಾರ ಅದು ಸಾವನ್ನಪ್ಪಿದೆ. ಮನೆ ಮಾಲೀಕನ ಪ್ರಕಾರ ಈ ನಾಯಿ ಅವರಿಗೆ ಭಾಗ್ಯಶಾಲಿಯಾಗಿತ್ತಂತೆ. ನಾಯಿ ಸಾಕಿದ ನಂತ್ರ ಮನೆ ಸಾಕಷ್ಟು ಅಭಿವೃದ್ಧಿಯಾಗಿತ್ತಂತೆ. ಮಗನಿಗೆ ಕೆಲಸ ಸಿಕ್ಕಿತ್ತಂತೆ.

ಬುಧವಾರ ನಾಯಿ ಸಾಯ್ತಾ ಇದ್ದಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಶವಯಾತ್ರೆ ನಡೆಸಿ ನಂತ್ರ ಅಂತ್ಯಸಂಸ್ಕಾರ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...