alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನ ಕೋರಿದ್ದ ದಂಪತಿಯನ್ನು ಯೋಗ ತರಗತಿಗೆ ಕಳಿಸಿದ ಕೋರ್ಟ್

ಪುಣೆಯ ಕೌಟುಂಬಿಕ ನ್ಯಾಯಾಲಯವೊಂದು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯನ್ನು ಲಾಫ್ಟರ್ ಯೋಗ ಥೆರಪಿ ಕ್ಲಾಸ್ ಗೆ ಕಳಿಸಿಕೊಟ್ಟಿದೆ. ಈ ಮೂಲಕ ದಂಪತಿಯ ಮಧ್ಯೆ ನಡೆಯುತ್ತಿದ್ದ ಕಲಹಕ್ಕೂ ಬ್ರೇಕ್ ಹಾಕಿದೆ.

ನಾಲ್ಕು ವರ್ಷಗಳಿಂದ ದಂಪತಿ ಮಧ್ಯೆ ಭಿನ್ನಾಭಿಪ್ರಾಯವಿತ್ತು. ವಿಚ್ಛೇದನಕ್ಕಾಗಿ ಇಬ್ಬರೂ ಕಾನೂನು ಹೋರಾಟ ನಡೆಸುತ್ತಿದ್ರು. ನಾಲ್ಕು ವರ್ಷದಿಂದ ಇದೇ ಒತ್ತಡದಲ್ಲಿ ಇಬ್ಬರೂ ನಗುವುದನ್ನೇ ಮರೆತಿದ್ದಾರೆ ಅನ್ನೋದನ್ನು ಗಮನಿಸಿದ ಜಡ್ಜ್ ಸ್ವಾತಿ ಚೌಹಾಣ್, ಇಬ್ಬರನ್ನೂ ಲಾಫ್ಟರ್ ಯೋಗ ಕ್ಲಾಸ್ ಗೆ ಕಳಿಸಿದ್ದಾರೆ.

ಪತಿ-ಪತ್ನಿಯ ಜಗಳದಲ್ಲಿ ಮಗು ಬಡವಾಗಿ ಹೋಗಿತ್ತು. ಯಾವಾಗ್ಲೂ ಕಿತ್ತಾಡುವ ಅಪ್ಪ-ಅಮ್ಮನನ್ನು ನೋಡಿ ಮಗು ಖಿನ್ನತೆಗೆ ಒಳಗಾಗಿತ್ತು. ಇದನ್ನು ಸಹ ನ್ಯಾಯಾಧೀಶರು ಗಮನಿಸಿದ್ದಾರೆ. ಕೌನ್ಸಿಲಿಂಗ್ ಮೂಲಕ ಇಬ್ಬರಿಗೂ ತಿಳಿಹೇಳಲು ಪ್ರಯತ್ನಿಸಿದ್ದಾರೆ.

ಆದ್ರೆ ಅದು ಫಲಕೊಟ್ಟಿಲ್ಲ. ಮಗುವಿನ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಧೀಶರು, ಹೆತ್ತವರನ್ನು ಲಾಫ್ಟರ್ ಯೋಗ ತರಗತಿಗೆ ಕಳಿಸಿಕೊಟ್ರು. ಈ ರೀತಿ ನಗುವುದರಿಂದ ಅವರಲ್ಲಿದ್ದ ಒತ್ತಡಗಳೆಲ್ಲ ದೂರವಾಗಿ, ಪರಸ್ಪರರನ್ನು ದೂಷಿಸುವುದು ಬಿಡಬಹುದು ಅನ್ನೋದು ನ್ಯಾಯಾಧೀಶರ ಲೆಕ್ಕಾಚಾರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...