alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಪಿಗಳ ಪತ್ತೆಗೆ ನೆರವಾಯ್ತು ನೆಲದ ಮೇಲೆ ಬಿದ್ದಿದ್ದ ಮೊಬೈಲ್

ಮಂಗಳವಾರ ಸಂಜೆ ದೆಹಲಿಯ ಖಾಸಗಿ ಕಛೇರಿಯೊಂದಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡವೊಂದು ಸಿಬ್ಬಂದಿಗಳನ್ನು ಬೆದರಿಸಿ 18 ಲಕ್ಷ ರೂಪಾಯಿಗಳನ್ನು ದೋಚಿತ್ತು. ಆದರೆ ಪೊಲೀಸರು ಪ್ರಕರಣ ದಾಖಲಾದ ಕೆಲ ಗಂಟೆಯೊಳಗೆ ಆರೋಪಿಗಳನ್ನು ಬಂದಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮೊಬೈಲ್ ಎಂಬುದು ಗಮನಾರ್ಹ.

ಚಾಂದಿನಿ ಚೌಕ್ ನ ಲಜ್ಪತ್ ರಾಯ್ ಮಾರ್ಕೆಟ್ ನಲ್ಲಿರುವ ಕಛೇರಿಯೊಂದಕ್ಕೆ ಸಂಜೆ 5-30 ರ ಸುಮಾರಿಗೆ ಪ್ರವೇಶಿಸಿದ್ದ ಐದು ಮಂದಿಯ ತಂಡ ಅಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಪಿಸ್ತೂಲು ತೋರಿಸಿ ಬೆದರಿಕೆ ಒಡ್ಡಿದ್ದು, ಬಳಿಕ ಕಛೇರಿಯಲ್ಲಿಡಲಾಗಿದ್ದ 18 ಲಕ್ಷ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.

ಈ ಕುರಿತು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದರಲ್ಲದೇ ಹಣ ದೋಚಿಕೊಂಡು ಪರಾರಿಯಾಗುವ ಗಡಿಬಿಡಿಯಲ್ಲಿ ಆರೋಪಿಯೊಬ್ಬ ಬೀಳಿಸಿಕೊಂಡು ಹೋಗಿದ್ದ ಮೊಬೈಲನ್ನು ವಶಕ್ಕೆ ಪಡೆದಿದ್ದರು.

ಈ ಮೊಬೈಲ್ ನಲ್ಲಿ ಅಪರಾಧಿಗಳೇ ಸೇರಿಕೊಂಡು ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದನ್ನು ಗಮನಿಸಿದ ಪೊಲೀಸರು ಮೊಹ್ಸಿನ್ ಆಲಂ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಮ್ಮ ತಂಡವೇ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಸಹಚರರ ಕುರಿತೂ ಮಾಹಿತಿ ನೀಡಿದ್ದು, ಸರ್ಫ್ರರಾಜ್ ಆಲಂ, ಸಚಿನ್, ಅಮನ್ ಹಾಗೂ ಕಾಶೀಂ ರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ 13,86,500 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...