alex Certify
ಕನ್ನಡ ದುನಿಯಾ       Mobile App
       

Kannada Duniya

ಫಲಹಾರಿ ಮಹಾರಾಜ್ ಅತ್ಯಾಚಾರ ಕೇಸ್ ಗೆ ಟ್ವಿಸ್ಟ್

ರಾಜಸ್ತಾನದ ಬಿಲಾಸಪುರ್ನ 21 ವರ್ಷದ ಯುವತಿ, ಬಾಬಾ ಫಲಹಾರಿ ಮಹಾರಾಜ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ. ಬಾಬಾ ಬಂಧನಕ್ಕೂ ಮೊದಲೆ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಾಬಾ ಶಿಷ್ಯನೊಬ್ಬ ಇದೊಂದು ಬ್ಲಾಕ್ಮೇಲಿಂಗ್ ಪ್ರಕರಣ ಎಂದು ದೂರು ನೀಡಿದ್ದಾನೆ.

ಅತ್ಯಾಚಾರದ ಆರೋಪ ಬರ್ತಿದ್ದಂತೆ ಬಾಬಾ ಆಸ್ಪತ್ರೆ ಸೇರಿದ್ದಾನೆ. ಫಲಹಾರಿ ಮಹಾರಾಜ್ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯೆ ಆತನ ಶಿಷ್ಯನೊಬ್ಬ ಇದೆಲ್ಲ ಸುಳ್ಳು. ಹಣಕ್ಕಾಗಿ ಬಾಬಾ ಹೆಸರು ಹಾಳು ಮಾಡಲಾಗ್ತಿದೆ ಎಂದು ಆರೋಪಿಸಿದ್ದಾನೆ.

ದೇವಸ್ಥಾನಲ್ಲಿ ಕೆಲಸ ಮಾಡುತ್ತಿರುವ  ಧರ್ಮೇಂದ್ರ ಶರ್ಮಾಗೆ ಒಂದು ಅನಾಮಧೇಯ ಕರೆ ಬಂದಿತ್ತಂತೆ. ಕರೆ ಮಾಡಿದ ವ್ಯಕ್ತಿ 10 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದಾನಂತೆ. ಹಣ ನೀಡದೆ ಹೋದಲ್ಲಿ ಬಾಬಾನ ಮರ್ಯಾದೆ ಕಳೆಯುವುದಾಗಿ ಬೆದರಿಸಿದ್ದನಂತೆ. ಜೊತೆಗೆ ಬಾಬಾನ ಇನ್ನೊಬ್ಬ ಶಿಷ್ಯ ಸುದರ್ಶನಾಚಾರ್ಯರ ಹೆಸರನ್ನೂ ಹಾಳು ಮಾಡುವುದಾಗಿ ಹೇಳಿದ್ದಾನಂತೆ. ತಕ್ಷಣ ಧರ್ಮೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾನೆ.

ಈ ಮಧ್ಯೆ ಫಲಹಾರಿ ಬಾಬಾನ ಮಹಿಳಾ ಶಿಷ್ಯರು ಬಾಬಾ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಾಬಾರಿಂದ ಎಲ್ಲ ಕಷ್ಟ ನಿವಾರಣೆಯಾಗಿದೆ. ಅವರು ಎಂದೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...