alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿ ಬಿದ್ದ ನೋಟು ಎತ್ತಿಕೊಳ್ಳಲು ಮುಗಿಬಿದ್ರು ಜನ

untitled-1-21

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಸೋಮವಾರ ವದಂತಿಯೊಂದು ಎಲ್ಲರೂ ಎಂಎಐಡಿಸಿ ರಸ್ತೆ ಕಡೆ ಓಡುವಂತೆ ಮಾಡಿತ್ತು. ರಸ್ತೆಯಲ್ಲಿಯೇ ಬೈಕ್, ಕಾರು ಬಿಟ್ಟು ಜನರು ರಸ್ತೆ ಬದಿಗೆ ಓಡುತ್ತಿದ್ದರು. ಕೆಲವರ ಕೈನಲ್ಲಿ ಚೀಲವಿದ್ರೆ ಮತ್ತೆ ಕೆಲವರ ಕೈನಲ್ಲಿ ಪ್ಲಾಸ್ಟಿಕ್ ಕವರ್ ಇತ್ತು. ಆದ್ರೆ ಓಡಿದ್ದು ಪ್ರಯೋಜನಕ್ಕೆ ಬರಲಿಲ್ಲ.

ಎಂಎಐಡಿಸಿ ರಸ್ತೆಯಲ್ಲಿ ಜನ ಸೇರಿದ್ದಾರೆಂಬ ಸುದ್ದಿ ಕೇಳಿ ಪೊಲೀಸರೂ ಸ್ಥಳಕ್ಕೆ ಬಂದ್ರು. ಅಲ್ಲಿ ನೆರೆದಿದ್ದ ಜನರನ್ನು ಚದುರಿಸಲು ಬೆವರು ಸುರಿಸಿದ್ರು. ಇಷ್ಟಕ್ಕೂ ಜನ ಎಂಎಐಡಿಸಿ ರಸ್ತೆ ಕಡೆ ಓಡಲು ಕಾರಣವಾಗಿದ್ದು ಹಣ. ರಸ್ತೆ ಬದಿಯಲ್ಲಿ 500-2000 ಮುಖ ಬೆಲೆಯ ನೋಟುಗಳ ರಾಶಿ ಬಿದ್ದಿತ್ತು. ಈ ಸುದ್ದಿ ತಿಳಿದ ಜನ ತಾ ಮುಂದು ನಾ ಮುಂದು ಅಂತಾ ಓಡಿ ಬಂದ್ರು.

ಹತ್ತಿರ ಬಂದು ನೋಡಿದಾಗ್ಲೆ ಸತ್ಯ ಗೊತ್ತಾಗಿದ್ದು. ಆ ಯಾವ ನೋಟು ಅಸಲಿಯಾಗಿರಲಿಲ್ಲ. ನಕಲಿ ನೋಟುಗಳಾಗಿತ್ತು. ರಾತ್ರಿ ಯಾರೋ ನಕಲಿ ನೋಟುಗಳನ್ನು ರಸ್ತೆ ಬದಿಗೆ ಎಸೆದು ಹೋಗಿದ್ದಾರೆ. ಅಷ್ಟಕ್ಕೂ ಇಷ್ಟೊಂದು ದೊಡ್ಡ ಪ್ರಮಾಣದ ನಕಲಿ ನೋಟು ಎಲ್ಲಿಂದ ಬಂತು ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...