alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ ಬಿ ಐ ಎಟಿಎಂನಿಂದ ಬಂತು ನಕಲಿ ನೋಟು

fake_notes_atm__1487745203_749x421

ಕಪ್ಪುಹಣ ನಿಯಂತ್ರಣ ಹಾಗೂ ನಕಲಿ ನೋಟುಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ಹಳೆ 1000 ಹಾಗೂ 500 ರೂ. ನೋಟುಗಳ ಮೇಲೆ ನಿಷೇಧ ಹೇರಿದೆ. ಹೊಸ 500 ಹಾಗೂ 2 ಸಾವಿರ ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದೆ. ಆದ್ರೆ 2 ಸಾವಿರ ರೂಪಾಯಿ ನಕಲಿ ನೋಟುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಬ್ಯಾಂಕ್ ಎಟಿಎಂಗಳಲ್ಲಿಯೇ ನಕಲಿ ನೋಟುಗಳು ಸಿಗ್ತಾ ಇವೆ.

ದೆಹಲಿಯ ಸಂಗಮ್ ವಿಹಾರ್ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ನಕಲಿ ನೋಟು ಸಿಕ್ಕಿದೆ. ಅಲ್ಲಿನ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ಎಟಿಎಂನಿಂದ ಹಣ ತೆಗೆದಿದ್ದಾನೆ. ಕೈಗೆ ಬಂದ 2 ಸಾವಿರ ರೂಪಾಯಿ ನೋಟಿನ ಮೇಲೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆದಿತ್ತಂತೆ. ನೋಟು ನಕಲಿ ಎಂಬುದನ್ನು ತಿಳಿದ ಉದ್ಯೋಗಿ ಬ್ಯಾಂಕ್ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಎಟಿಎಂನಲ್ಲಿಯೇ ನಕಲಿ ನೋಟು ಸಿಗ್ತಾ ಇರೋದು ಜನರ ಗೊಂದಲಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...