alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಯರ್ ಮಾಡಿದ ಭಾರೀ ಎಡವಟ್ಟು ಬಹಿರಂಗ

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಚಿತ್ರಕ್ಕೆ ಇನ್ಯಾವುದೋ ಬಣ್ಣ ಹಚ್ಚುವ ಖಯಾಲಿ ಹೆಚ್ಚಾಗಿ, ಅನೇಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸುಳ್ಳಲ್ಲ. ಇದಕ್ಕೆ ಈಗ ಅಹಮದಾಬಾದ್ ಮೇಯರ್ ಟ್ವೀಟ್ ಕೂಡ ಸೇರಿದೆ.

ಹೌದು, ನ.6 ರಂದು ಅಹಮದಾಬಾದ್ ಮೇಯರ್ ಬಿಜಲ್ ಪಾಟೀಲ್, ಸಬರಮತಿ ನದಿ ದಂಡೆಯ ಚಿತ್ರವೆಂದು ಒಂದು ಟ್ವೀಟ್ ಮಾಡಿದ್ದರು. ಮೇಯರ್ ಹಾಕಿದ ಮನಮೋಹಕ‌ ಚಿತ್ರಕ್ಕೆ ನೆಟ್ಟಿಗರು ಫಿದಾ ಆಗಿ, ಬಿಜೆಪಿ ಕಾರ್ಯಕರ್ತರು ಇದನ್ನು ತಮ್ಮ ಸರಕಾರದ ಅಭಿವೃದ್ಧಿಯ ಸಂಕೇತವೆಂದು ಹೇಳಿಕೊಂಡರು.

ಆದರೆ ನೈಜ‌ ಸಂಗತಿ ಏನೆಂದರೆ, ಮೇಯರ್ ಹಾಕಿಕೊಂಡಿರುವ‌ ಸಬರಮತಿ‌ ದಂಡೆಯ ಫೋಟೊ ಅಸಲಿ ಗುಜರಾತ್ ರಾಜ್ಯದ್ದೆ ಅಲ್ಲವಂತೆ. ಈ ಫೋಟೊ ದಕ್ಷಿಣ ಕೊರಿಯಾದ ಹಾನ್ ನದಿ ದಂಡೆಯ ಚಿತ್ರವೆಂದು ಇದೀಗ ಬಯಲಾಗಿದೆ.

ಗೂಗಲ್ ನಲ್ಲಿರುವ‌ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಈ‌ ಮಾಹಿತಿ ಬಹಿರಂಗವಾಗಿದ್ದು,‌ ಎ.ಎಲ್.ಟಿ. ನ್ಯೂಸ್ ಸಂಸ್ಥೆ ಈ ಅಸಲಿ‌ ಮಾಹಿತಿಯನ್ನು ಬಹಿರಂಗಗೊಳಿಸಿರುವುದು, ಇದೀಗ ಮೇಯರ್ ರನ್ನು ಮುಜುಗರಕ್ಕೆ ಸಿಲುಕಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...