alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿವೆ ಮೋದಿ, ರಾಜನಾಥ್ ಸಿಂಗ್ ನಕಲಿ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಅವರ ನಕಲಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮೋದಿ ಮತ್ತು ರಾಜನಾಥ್ ಅವರ ಫೋಟೋಗಳನ್ನು ತಿರುಚಿ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಇದು ಭಾರೀ ಚರ್ಚೆಗೆ ಒಳಗಾಗಿದೆ. ಫೋಟೋಶಾಪ್ ನಲ್ಲಿ ತಿರುಚಿದ ಈ ಚಿತ್ರಗಳನ್ನು ಅಪಪ್ರಚಾರಕ್ಕೆ ಬಳಸಲಾಗ್ತಿದೆ ಎಂದು ಬಿ.ಜೆ.ಪಿ. ಆಕ್ರೋಶ ವ್ಯಕ್ತಪಡಿಸಿದೆ.

ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಮೋದಿ ಕೈಕುಲುಕುತ್ತಿರುವ ಫೋಟೋ ತಿರುಚಲಾಗಿದೆ. ಶರೀಫ್ ಜಾಗದಲ್ಲಿ ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಹಫೀಜ್ ಚಿತ್ರ ಹಾಕಲಾಗಿದೆ.

ಅದೇ ರೀತಿ ‘ಕ್ಯಾ ಯೇ ಸಚ್ ಹೈ’ ಚಿತ್ರದಲ್ಲಿನ ಫೋಟೋ ಬಳಸಿಕೊಂಡು ರಾಜನಾಥ್ ಕಾಲಿಗೆ ಪೊಲೀಸ್ ಅಧಿಕಾರಿ ನಮಸ್ಕರಿಸುವ ಚಿತ್ರ ರಚಿಸಲಾಗಿದೆ.

ಈ ಎರಡೂ ಚಿತ್ರಗಳನ್ನು ಆದರ್ಶ್ ಚಿಸ್ತಿ, ಅಲಮ್ಗಿರ್ ರಿಜ್ವಿ ಎಂಬುವವರು ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ವಕ್ತಾರ ಸಂಜಯ್ ಝಾ, ಇದು ಅತಿರೇಕದ ವಿಷಯ ಎಂದು ಹೇಳಿದ್ದಾರೆ. ಇವು ನಕಲಿ ಫೋಟೋ ಎಂದು ಗೊತ್ತಾಗುತ್ತಿದ್ದಂತೆ ಮುಜುಗರಕ್ಕೀಡಾದ ಅವರು ತಮ್ಮ ರೀಟ್ವೀಟ್ ಡಿಲಿಟ್ ಮಾಡಿದ್ದಾರೆ. ಈ ನಕಲಿ ಚಿತ್ರಗಳು ವೈರಲ್ ಆಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...