alex Certify
ಕನ್ನಡ ದುನಿಯಾ       Mobile App
       

Kannada Duniya

ಗಲಭೆಗೆ ಕಾರಣವಾಯ್ತು ನಕಲಿ ಫೇಸ್ ಬುಕ್ ಪೋಸ್ಟ್

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಹಾಕಿದ ನಕಲಿ ಪೋಸ್ಟ್ ನಿಂದಾಗಿ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಮೂರು ಮಂದಿ ಕಿಡಿಗೇಡಿಗಳು, ಗುರುವಾರ ಕೇದಾರನಾಥ್ ವ್ಯಾಲಿಯಲ್ಲಿ ಅನ್ಯ ಧರ್ಮಿಯನೊಬ್ಬ ಹುಡುಗಿಯನ್ನು ರೇಪ್ ಮಾಡಿದ್ದಾನೆಂಬ ಬಗ್ಗೆ ಫೇಸ್ ಬುಕ್ ನಲ್ಲಿ ನಕಲಿ ಪೋಸ್ಟ್ ಹಾಕಿ ನಕಲಿ ಪೋಟೋವನ್ನೂ ಅಪ್ಲೋಡ್ ಮಾಡಿದ್ದರು.

ಇದರಿಂದ ಅಗಸ್ತ್ಯಮುನಿ ಎಂಬಲ್ಲಿ ಕೋಮು ಸೌಹಾರ್ದ ಕದಡಿದ್ದು ಪ್ರತಿಭಟನಾ ಮೆರವಣಿಗೆ, ಘೋಷಣೆ, ಕಲ್ಲು ತೂರಾಟ ಮೊದಲಾದ ಅಹಿತಕರ ಘಟನೆಗಳು ನಡೆದವು. ಆದರೆ ಪೊಲೀಸರು ಇಂಥ ಯಾವುದೇ ಘಟನೆ ವರದಿಯಾಗಿಲ್ಲ. ಇದೊಂದು ನಕಲಿ ಸುದ್ದಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ನಕಲಿ ಪೋಸ್ಟ್ ಹಾಕಿದ್ದ ಮೆಹಕರ್ ಸಿಂಗ್, ಸಂತು ಹಾಗೂ ಸೋನಿ ಕಪೂರ್ ಎಂಬುವವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ 10 ಮಂದಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...