alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ನಕಲಿ ನೋಟು ಎಲ್ಲಿ ಸಿಗ್ತು ಕೇಳುತ್ತೆ ಬ್ಯಾಂಕ್

bank_counter_

ನಕಲಿ ನೋಟ್ ಎಲ್ಲಿ ಸಿಗ್ತು ಅಂತಾ ಬ್ಯಾಂಕ್ ಕೌಂಟರ್ ನಲ್ಲಿ ಕೇಳಿದ್ರೆ ಆಶ್ಚರ್ಯಪಡಬೇಡಿ. ಎರಡು ಮೂರು ನೋಟು ಸಿಕ್ಕರೆ ಬ್ಯಾಂಕ್ ಈ ಪ್ರಶ್ನೆಯನ್ನು ಕೇಳಿಯೇ ಕೇಳುತ್ತೆ. ನೋಟ್ ಎಲ್ಲಿ ಸಿಗ್ತು ಮತ್ತೆ ಹೇಗೆ ಸಿಗ್ತು ಅಂತಾ ಗ್ರಾಹಕರಿಂದ ಬ್ಯಾಂಕ್ ಮಾಹಿತಿ ಪಡೆಯಲಿದೆ.

ಅಹಮದಾಬಾದ್ ಪೊಲೀಸರು ನಕಲಿ ನೋಟು ಜಾಲ ಪತ್ತೆ ಹಚ್ಚಲು ಬ್ಯಾಂಕ್ ಗಳ ಸಹಾಯ ಕೇಳಿದ್ದಾರೆ. ನಕಲಿ ನೋಟು ಸಿಕ್ಕ ನಂತ್ರ ಅದು ಎಲ್ಲಿ ಸಿಗ್ತು? ಹೇಗೆ ಸಿಗ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದಾರೆ. ನಕಲಿ ನೋಟುಗಳ ಚಲಾವಣೆ ಜಾಲವನ್ನು ಪತ್ತೆ ಹಚ್ಚಿ, ಅದನ್ನು ಹತ್ತಿಕ್ಕಲು ಈ ತೀರ್ಮಾನಕ್ಕೆ ಬರಲಾಗಿದೆ.

ಹೆಸರು, ಇತರ ವಿವರಗಳನ್ನು ಕೇಳುವ ಜೊತೆಗೆ ಹಣ ಎಲ್ಲಿ ಸಿಗ್ತು ಎಂಬ ಮಾಹಿತಿ ಪಡೆದು ಆ ಮೂಲಕ ಜಾಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಡಿಸೆಂಬರ್ 2015 ರಿಂದ ಜೂನ್ 2016 ರವರೆಗೆ 5.23 ಕೋಟಿ ನಕಲಿ ನೋಟನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪರಾಧಿಗಳು ಅರ್ಧ ಬೆಲೆಗೆ ನಕಲಿ ನೋಟುಗಳನ್ನು ಖರೀದಿಸುತ್ತಿದ್ದಾರೆಂಬ ಮಾಹಿತಿಯೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...